

ಬಹುಭಾಷಾ ನಟಿ ರಮ್ಯಾ ಕೃಷ್ಣ ತೆಲುಗು ತಮಿಳು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪೋಷಕ ಪಾತ್ರಗಳ ಮೂಲಕವೇ ಗಮನಸೆಳೆಯುವ ರಮ್ಯಾ ಕೃಷ್ಣ, ಇದೀಗ ಹೊಸ ಪ್ರಯೋಗವೊಂದಕ್ಕೆ ಅಡಿಯಿಟ್ಟಿದ್ದಾರೆ. ಅಂದರೆ, ಬೋಲ್ಡ್ ರೀತಿಯ ಪಾತ್ರವನ್ನು ಮೈಮೇಲೆ ಎಳೆದುಕೊಳ್ಳಲು ತಯಾರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು, ಬಾಲಿವುಡ್ನಲ್ಲಿ 2018ರಲ್ಲಿ ತೆರೆಕಂಡು ರಾಷ್ಟ್ರ ಪ್ರಶಸ್ತಿ ಗಿಟ್ಟಿ ಸಿಕೊಂಡ ಅಂಧಾದುನ್ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಮೂಲ ಚಿತ್ರದಲ್ಲಿ ಟಬು ಮಾಡಿದ್ದ ಮಾತ್ರವನ್ನು ರಮ್ಯಾ ಕೃಷ್ಣ ನಿಭಾಯಿಸಲಿದ್ದಾರಂತೆ.
ಅಂದಹಾಗೆ ಈಗಾಗಲೇ ವೆಂಕಟಾದ್ರಿ ಎಕ್ಸ್ಪ್ರೆಸ್ , ಎಕ್ಸ್ಪ್ರೆಸ್ ರಾಜ, ಕೃಷ್ಣಾರ್ಜುನ ಯುದ್ಧಂ ಸಿನಿಮಾ ನಿರ್ದೇಶನ ಮಾಡಿದ್ದ ಮೆರ್ಲಪಾಕ ಗಾಂಧಿ ಇನ್ನು ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಆಯುಷ್ಮಾನ್ ಖುರಾನಾ ಮಾಡಿದ್ದ ಮಾತ್ರವನ್ನು ತೆಲುಗಿನಲ್ಲಿ ನಿತಿನ್ ನಿಭಾಯಿಸುವುದರ ಜತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹೂಡುತ್ತಿದ್ದಾರೆ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾರಂಗ ಸ್ತಗಿತಗೊಂಡಿದ್ದು, ಲಾಕ್ಡೌನ್ ತೆರವು ಮುಗಿಯುತ್ತಿದ್ದಂತೆ ಸಿನಿಮಾ ಕೆಲಸಗಳು ಶುರುವಾಗಲಿವೆ. (ಏಜೆನ್ಸೀಸ್)