

ಯಾಕೋ ಈ ವರ್ಷ ಅಕ್ಷಯ್ ಕುಮಾರ್ ಪಾಲಿಗೆ ಅಷ್ಟು ಚೆನ್ನಾಗಿದ್ದ ಹಾಗಿಲ್ಲ. ಈ ವರ್ಷ ಅಕ್ಷಯ್ ಅಭಿನಯದ ‘ಬಚ್ಚನ್ ಪಾಂಡೆ’, ‘ಪೃಥ್ವಿರಾಜ್’ ಮತ್ತು ‘ರಕ್ಷಾ ಬಂಧನ್’ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಆದರೆ, ಮೂರೂ ಅಷ್ಟು ಸದ್ದು ಮಾಡಲಿಲ್ಲ. ಹೀಗಿರುವಾಗಲೇ ಅಕ್ಷಯ್ ಅಭಿನಯದ ಇನ್ನೊಂದು ಚಿತ್ರ ದೀಪಾವಳಿಗೆ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದೇ ‘ರಾಮ್ ಸೇತು’. ಮೊದಲ ಹಂತವಾಗಿ ಸೋಮವಾರ ಟೀಸರ್ ಸಹ ಬಿಡುಗಡೆಯಾಗಿದೆ.
‘ರಾಮ್ ಸೇತು’ ನೈಸರ್ಗಿಕವೋ ಅಥವಾ ಮಾನವ ನಿರ್ವಿುತವೋ ಎಂಬ ವಿಷಯದ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಈಗ ಅದನ್ನೇ ಆಧರಿಸಿ ಬಾಲಿವುಡ್ನಲ್ಲಿ ಸಿನಿಮಾ ನಿರ್ವಣವಾಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಅಕ್ಷಯ್ ಕುಮಾರ್ ಪುರಾತತ್ವ ಶಾಸ್ತ್ರಜ್ಞನಾಗಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ಅವರ ಜತೆಗೆ ಜಾಕ್ಲೀನ್ ಫರ್ನಾಂಡಿಸ್, ನುಸ್ರತ್ ಬರೂಚ, ಸತ್ಯದೇವ್, ನಾಜರ್ ಸೇರಿದಂತೆ ಹಲವರು ನಟಿಸಿದ್ದಾರೆ. ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಹಲವು ವಿಷಯಗಳನ್ನು ಆಧರಿಸಿ ಮಾಡಲಾಗಿರುವ ಈ ಚಿತ್ರವನ್ನು ಅಭಿಷೇಕ್ ಶರ್ಮ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅರುಣ್ ಭಾಟಿಯಾ ಮತ್ತು ವಿಕ್ರಮ್ ಮಲ್ಹೋತ್ರ ಜಂಟಿಯಾಗಿ ನಿರ್ವಿುಸಿದ್ದಾರೆ. - ಏಜೆನ್ಸೀಸ್