ಹೆಂಡತಿಗಾಗಿ ನಳ ಮಹಾರಾಜನಾದ ರಾಮ್‌ಚರಣ್ ತೇಜ

Ramcharan Teja - Final
Published on

ಈ ಲಾಕ್‌ಡೌನ್ ಆಗಿದ್ದೇ ಆಗಿದ್ದು, ಫೈಟು-ಡ್ಯಾನ್ಸು ಅಂತ ಬ್ಯುಸಿಯಾಗಿದ್ದ ಹೀರೋಗಳೆಲ್ಲಾ ಮನೆ ಸೇರಿಬಿಟ್ಟಿದ್ದಾರೆ. ಇನ್ನೂ ಕೆಲವರು ಅಡುಗೆ ಮನೆಗೆ ಹೋಗಿ ಹೆಂಡತಿಯರಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ, ರಾಮ್‌ಚರಣ್ ತೇಜ ಹೆಂಡತಿಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಾಗಿ, ಅಡುಗೆ ಮಾಡಿ ಬಡಸಿದ್ದಾರೆ.

ಹೌದು, ಸದ್ಯ ಮನೆಯಲ್ಲೇ ಬಂಧಿಯಾಗಿರುವ ರಾಮ್‌ಚರಣ್ ತೇಜ ತಮ್ಮ ಮಡದಿಯ ಇಷ್ಟದ ಆಹಾರವನ್ನು ತಯಾರಿಸಿದ್ದಾರೆ. ಇದನ್ನು ಹೇಳಿಕೊಂಡಿದ್ದು ಬೇರ‌್ಯಾರೋ ಅಲ್ಲ, ರಾಮ್‌ಚರಣ್ ಹೆಂಡತಿ ಉಪಾಸನಾ ಸೋಷಿಯಲ್ ಮೀಡಿಯಾ ಮೂಲಕ ಈ ವಿಷಯವನ್ನು ಜಗಜ್ಜಾಹೀರು ಮಾಡಿದ್ದಾರೆ.

ತಮ್ಮ ಗಂಡ ಅಡುಗೆ ಮಾಡುತ್ತಿರುವ ವೀಡಿಯೋವೊಂದನ್ನು ಉಪಾಸನಾ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಗಂಡನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಹೆಂಡತಿಗಾಗಿ ಅಡುಗೆ ಮಾಡುವುದಷ್ಟೇ ಅಲ್ಲ, ನಂತರ ಅವರೇ ಕ್ಲೀನ್ ಮಾಡಿದ್ದಾರೆ. ಅದಕ್ಕೇ ಅವರನ್ನ ನಾನು ಹೀರೋ ಅಂತ ಕರೆಯೋದು’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನು ನೋಡಿ, ಬೇರೆ ಯಾವ್ಯಾವ ಹೀರೋಗಳ ಹೆಂಡತಿಯರು, ತಮ್ಮ ಗಂಡ ತಮಗಾಗಿ ಅಡುಗೆ ಮಾಡಲಿ ಎಂದು ದುಂಬಾಲು ಬೀಳುತ್ತಾರೋ ಎಂಬುದನ್ನು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net