

ಹೈದರಾಬಾದ್: ಈ ವರ್ಷ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಚಿತ್ರತಂಡ ಆಲಿಯಾ ಭಟ್ ಜನ್ಮದಿನದ ಪ್ರಯುಕ್ತ ಸೀತಾ ಪಾತ್ರವನ್ನು ರಿವೀಲ್ ಮಾಡಿತ್ತು.
ಇಂದು ಚಿತ್ರದ ಅಲ್ಲೂರಿ ಸೀತಾರಾಮ ರಾಜು ಪಾತ್ರಧಾರಿ ರಾಮ್ಚರಣ್ ತೇಜ್ ಅವರಿಗೆ ಆರ್ಆರ್ಆರ್ ಚಿತ್ರತಂಡ ಭರ್ಜರಿ ಗಿಪ್ಟ್ ನೀಡಿದೆ. ಮಾರ್ಚ್ 27 ರಂದು ರಾಮ್ಚರಣ್ ಅವರ ಜನ್ಮದಿನದ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ಅಲ್ಲೂರಿ ಸೀತಾರಾಮ ರಾಜು ಪಾತ್ರದ ಪೋಸ್ಟ್ರ್ನ್ನು ಬಿಡುಗಡೆ ಮಾಡಿದೆ.
ನಿರ್ದೇಶಕ ಎಸ್ಎಸ್ ರಾಜಮೌಳಿ ಹಂಚಿಕೊಂಡಿರುವ ಈ ನೂತನ ಪೋಸ್ಟ್ರ್ನಲ್ಲಿ ರಾಮ್ಚರಣ್ ಬಿಲ್ಲು ಬಾಣ ಹಿಡಿದು ಖಡಕ್ ಆಗಿ ಮಿಂಚಿದ್ದಾರೆ. The man of bravery, honour and integrity. Presenting my #AlluriSitaRamaraju to you all... ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇದೇ ಪೋಸ್ಟ್ರನ್ನು ರಾಮ್ಚರಣ್ ಅವರೂ ಕೂಡ ಹಂಚಿಕೊಂಡಿದ್ದು, Bravery, honour and integrity. A man who defined it all! It's my privilege to take on the role of #AlluriSitaRamaraju ಎಂದು ಧನ್ಯವಾದ ತಿಳಿಸಿದ್ದಾರೆ. ಅಂದಹಾಗೇ ರಾಮ್ಚರಣ್ ಮಾ 27 ಕ್ಕೆ 37 ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಸುಮಾರು 400 ಕೋಟಿ ರೂಪಾಯಿ ಬಜೆಟ್ನ ಚಿತ್ರವಾದ ಆರ್ಆರ್ಆರ್ ನಲ್ಲಿ ರಾಮಚರಣ್, ಜೂನಿಯರ್ ಎನ್ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಅನೇಕ ಖ್ಯಾತ ನಾಮರು ನಟಿಸುತ್ತಿದ್ದಾರೆ. ಈ ವರ್ಷ ಅಕ್ಟೋಬರ್ 31 ಕ್ಕೆ ಸಿನಿಮಾ ರಿಲೀಸ್ ಆಗಲಿದೆ. (ಏಜೇನ್ಸಿಸ್).