ಚಿಕ್ಕಪ್ಪ ಪವನ್​ ಕಲ್ಯಾಣ್​ ಪಿರಿಯಡ್​ ಡ್ರಾಮಾ ಶೈಲಿಯ ಚಿತ್ರದಲ್ಲಿ ರಾಮ್​ ಚರಣ್​ ರೋಲ್​ ಎಂಥದ್ದು ಗೊತ್ತಾ?

ಪವನ್
Published on

"ಮಣಿಕಣಿರ್ಕಾ: ದಿ ಕ್ವಿನ್​ ಆಫ್​​ ಝಾನ್ಸಿ', "ಎನ್​ಟಿಆರ್​; ಕಥಾನಾಯಕುಡು' ಸೇರಿ ಹಲವು ಬಿಗ್​ ಬಜೆಟ್​ನ ಪಿರಿಯಡ್​ ಡ್ರಾಮಾ ಶೈಲಿಯ ಸಿನಿಮಾ ಮಾಡಿದ್ದ ನಿರ್ದೇಶಕ ಕ್ರಿಶ್​ ಜಗರ್ಲಮುಡಿ ಪವನ್​ ಕಲ್ಯಾಣ್​ ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತಿರುವ ವಿಚಾರ, ಇದೀಗ ಇದೇ ಸಿನಿಮಾ ಕುರಿತ ಹೊಸ ಸುದ್ದಿಯೊಂದು ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಅದೇನೆಂದರೆ, ಈ ಪಿರಿಯಡ್​ ಡ್ರಾಮಾ ಶೈಲಿಯ ಸಿನಿಮಾದಲ್ಲಿ ರಾಮ್​ಚರಣ್​ ತೇಜ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ!
ಹೌದು, ಇಲ್ಲಿಯವರೆಗೂ ಚಿಕ್ಕಪ್ಪನ ಜತೆ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳದ ರಾಮ್​ಚರಣ್​ ಆ ಆಸೆಯನ್ನು ಕ್ರಿಶ್​ ನಿರ್ದೇಶನದ ಸಿನಿಮಾ ಮೂಲಕ ಈಡೇರಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕರು, ಲಾಕ್​ಡೌನ್​ ಮುಗಿಯುತ್ತಿದ್ದಂತೆ ಶೂಟಿಂಗ್​ಗೆ ಚಾಲನೆ ನೀಡಲಿದ್ದಾರಂತೆ.
ಮೊಘಲ್​ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿರುವುದರಿಂದ ಚಿತ್ರದ ವಿಶೇಷ ಅತಿಥಿ ಪಾತ್ರವೊಂದಕ್ಕಾಗಿ ರಾಮ್​ ಚರಣ್​ ಸೂಕ್ತ ಎಂಬುದನ್ನು ಪವನ್ ಹತ್ತಿರ ಚರ್ಚಿಸಿದ್ದಾರಂತೆ. ಕಥಾನಾಯಕನ ಹಿನ್ನೆಲೆಯನ್ನು ವಿವರಿಸುವ ಪಾತ್ರಧಾರಿಯಾಗಿ ರಾಮ್​ ಕಾಣಿಸಿಕೊಳ್ಳಲಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೆ, "ಆರ್​ಆರ್​ಆರ್​' ಶೂಟಿಂಗ್​ ಮುಗಿಯುತ್ತಿದ್ದಂತೆ ಈ ಸಿನಿಮಾ ಕುರಿತು ಚರ್ಚೆ ಮಾಡಲಿದ್ದಾರಂತೆ.
(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net