ನನ್ನ ಗಂಡ ಹೀಗಿರಬೇಕು..: ರಾಕುಲ್​ಗೆ ತನ್ನ ಹುಡುಗ ಹೀಗೇ ಇರಬೇಕಂತೆ!

Rakul Preth vvani
Published on

ಸಹಜವಾಗಿ ಸಿನಿಮಾ ಮಂದಿಯ ಮದುವೆ ಅಂದ ತಕ್ಷಣ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಅವರನ್ನು ವರಿಸುವ ಹುಡುಗ ಯಾರಿರಬಹುದು? ಹೇಗಿರಬಹುದೆಂಬ ಕ್ಯೂರಿಯಾಸಿಟಿ ಸಹಜ. ಅದೇ ರೀತಿ ನನ್ನ ಹುಡುಗ/ಹುಡುಗಿ ಹೇಗಿರಬೇಕು ಎಂಬ ನೂರಾರು ಆಸೆ ಕನಸುಗಳೂ ಪ್ರತಿಯೊಬ್ಬರಲ್ಲಿರುತ್ತದೆ. ಇದೀಗ ಆ ಪ್ರಶ್ನೆಗೆ ಬಹುಭಾಷಾ ನಟಿ ರಾಕುಲ್ ಉತ್ತರ ನೀಡಿದ್ದಾರೆ. ಅಂದರೆ, ರಾಕುಲ್​ನನ್ನು ವರಿಸೋ ಗಂಡು ಹೇಗಿರಬೇಕು ಎಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

‘ನನ್ನ ಪ್ರಕಾರ ಪ್ರೀತಿ ಎಂದರೆ, ನಾನು ನನ್ನ ಹೆತ್ತವರಲ್ಲಿ ಏನು ನೋಡುತ್ತೇನೋ ಅದು ಪ್ರೀತಿ. ನಾನು ಮದುವೆ ಅನ್ನೋ ಸಂಬಂಧ, ಬಾಂಧವ್ಯ ಮತ್ತು ಸಂಪ್ರದಾಯವನ್ನು ನಂಬುತ್ತೇನೆ. ಇನ್ನು ನನ್ನ ಹುಡುಗನ ಬಗ್ಗೆ ಹೇಳುವುದಾದರೆ, ಮೊದಲಿಗೆ ಆತ ಎತ್ತರದ ನಿಲುವುವುಳ್ಳವನಾಗಿರಬೇಕು. ಒಳ್ಳೆಯ ವಿದ್ಯಾಭ್ಯಾಸ ಮಾಡಿಕೊಂಡು ಬುದ್ಧಿವಂತನಾಗಿರಬೇಕು. ಮೂರನೆಯದ್ದು ಮತ್ತು ಕೊನೆಯದಾಗಿ ಜೀವನದಲ್ಲಿ ಒಂದಷ್ಟು ಉದ್ದೇಶ ಹೊಂದಿದವನಾಗಿರಬೇಕು ...’ ಹೀಗೆ ತಾನು ಮದುವೆ ಆಗುವ ಹುಡುಗ ಹೇಗಿರಬೇಕೆಂದು ಹೇಳಿದ್ದಾರೆ ರಾಕುಲ್. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net