ರಾಕುಲ್​ಗೆ ಲವ್ ಆಗಿದೆ

Rakul
Published on

ರಾಕುಲ್ ಪ್ರೀತ್ ಸಿಂಗ್ ಕೊನೆಗೂ ತನ್ನ ಪ್ರೇಮಿ ಯಾರು ಎಂಬ ರಹಸ್ಯ ಬಿಚ್ಚಿಟ್ಟಿದ್ದಾರೆ. ರಾಕುಲ್​ಗೆ ಲವ್ ಆಗಿದೆ ಎಂಬ ಸುದ್ದಿ ಈ ಹಿಂದೆ ಹಲವು ಸಲ ಮುನ್ನೆಲೆಗೆ ಬಂದಿತ್ತು. ಆದರೆ, ಆ ಅದೃಷ್ಟವಂತ ಯಾರಿರಬಹುದು ಎಂಬ ವಿಚಾರ ಮಾತ್ರ ಗೊತ್ತಾಗಿರಲಿಲ್ಲ. ಅವರಿವರ ಹೆಸರು ತಳುಕು ಹಾಕಿಕೊಂಡರೂ ಅಧಿಕೃತ ಇವರೇ ಎಂದು ಸ್ವತಃ ರಾಕುಲ್ ಹೇಳಿಕೊಂಡಿರಲಿಲ್ಲ. ಇದೀಗ ಆ ಎಲ್ಲದಕ್ಕೂ ರಾಕುಲ್ ಪೂರ್ಣವಿರಾಮ ಇಟ್ಟಿದ್ದಾರೆ.

‘ಈತನೇ ನನ್ನ ಜೀವ, ಈತನೇ ನನ್ನ ಎಲ್ಲ ...’ ಎಂದು ಬಹಿರಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಆತನ ಫೋಟೋ ಜತೆಗೆ ಪೋಸ್ಟ್ ಹಾಕಿದ್ದಾರೆ. ಹಾಗಾದರೆ ಯಾರವರು? ಬಾಲಿವುಡ್​ನ ಜನಪ್ರಿಯ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ. ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ, ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ. ದಕ್ಷಿಣದ ಮತ್ತು ಬಾಲಿವುಡ್​ನ ಸಿನಿಮಾ ಸ್ನೇಹಿತರೆಲ್ಲರೂ ಈ ಜೋಡಿಗೆ ಕಂಗ್ರಾಟ್ಸ್ ಹೇಳಿದ್ದಾರೆ. ‘ಧನ್ಯವಾದ ನನ್ನ ಲವ್. ಈ ವರ್ಷದ ಅತ್ಯುತ್ತಮ ಉಡುಗೊರೆ ನೀನು. ನನ್ನ ಜೀವನಕ್ಕೆ ಬಣ್ಣ ತುಂಬಿದ್ದಕ್ಕೆ ಥ್ಯಾಂಕ್ಯೂ’ ಎಂದು ರಾಕುಲ್ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net