ನನಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಮೇಲೆ ನಂಬಿಕೆ ಇಲ್ಲ: ನಟಿ ರಾಕುಲ್​​ ಪ್ರೀತ್​ ಸಿಂಗ್​

Rakul Preth vvani
Published on

ಮುಂಬೈ: ಮಾರ್ಚ್​ 8ರಂದು ಜಾಗತಿಕವಾಗಿ ಆಚರಿಸಲ್ಪಡುವ ಅಂತಾರಾಷ್ಟ್ರೀಯ ಮಹಿಳಾ ದಿನ ಕುರಿತು ಬಾಲಿವುಡ್​ ನಟಿ ರಾಕುಲ್​ ಪ್ರೀತ್ ಸಿಂಗ್​ ಅವರು ತಮ್ಮದೇಯಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನನಗೆ ಮಹಿಳಾ ದಿನದ ಮೇಲೆ ನಂಬಿಕೆ ಇಲ್ಲ. ನಾವು ಪುರುಷರ ದಿನವನ್ನು ಎಂದಿಗೂ ಆಚರಿಸುವುದಿಲ್ಲ. ಹೀಗಾಗಿ ಮಹಿಳಾ ದಿನವವನ್ನು ಕೇವಲ ಒಂದು ದಿನಕ್ಕಾಗಿ ಆಚರಿಸಬೇಕೆ? ನಾವು ಪ್ರತಿದಿನವೂ ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ಹೇಳಿದರು.

ನಮ್ಮ ಸುತ್ತಲಿನ ಮಹಿಳೆಯರನ್ನು ಎಲ್ಲರೂ ಗೌರವಿಸಬೇಕೆಂದು ನಾನು ಭಾವಿಸುತ್ತೇನೆ. ಇದು ತುಂಬಾ ಮಹತ್ವದ ವಿಚಾರವೂ ಹೌದು. ಈಗಾಗಿ ನಾವು ಉತ್ತಮ ಹಾದಿಯಲ್ಲಿ ಮಹಿಳಾ ದಿನವನ್ನು ಆಚರಿಸೋಣ ಎಂದು ರಾಕುಲ್​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net