Big Bossಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ ರಾಖಿ ಸಾವಂತ್; ಈ ಬಾರಿ ಜೋಡಿಯಾಗಿ!

rakhi
Published on

ಮುಂಬೈ: ಹಿಂದಿ ಬಿಗ್ ​​ಬಾಸ್ 15ನೇ ಆವೃತ್ತಿಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಮತ್ತೆ ನೃತ್ಯಗಾರ್ತಿ ಹಾಗೂ ನಟಿ ರಾಖಿ ಸಾವಂತ್​ ಎಂಟ್ರಿ ಕೊಡಲಿದ್ದಾರೆ. ವಿಶೇಷವೆಂದರೆ, ತಮ್ಮ ವಿಶಿಷ್ಟ ಹಾವಭಾವಕ್ಕೆ ಹೆಸರಾಗಿರುವ ರಾಖಿ ಈ ಬಾರಿ ತಮ್ಮ ಜೊತೆ ಪತಿ ರಿತೇಶ್​​ರನ್ನೂ ಬಿಗ್​ ಬಾಸ್​ ಮನೆಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ.

ಬಿಗ್​ ಬಾಸ್​ ಆರಂಭಿಕ ಆವೃತ್ತಿಯಲ್ಲಿ ಗಮನ ಸೆಳೆದಿದ್ದ ರಾಖಿ ಕಳೆದ ಬಾರಿ(ಬಿಗ್​ಬಾಸ್​ 14) ಕೂಡ ವೈಲ್ಡ್​ ಕಾರ್ಡ್​ ಮೂಲಕ ಪ್ರವೇಶ ಗಳಿಸಿದ್ದರು. ಫೈನಲ್​ ತಲುಪಿದ ನಂತರ 14 ಲಕ್ಷ ರೂಪಾಯಿಗಳೊಂದಿಗೆ ಶೋನಿಂದ ಹೊರಬಂದಿದ್ದರು. ಆದರೆ ಈ ಬಾರಿ ತಾವು ಹಣದ ಚೀಲದೊಂದಿಗೆ ಆಚೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಎನ್​ಆರ್​ಐ ಬಿಸಿನೆಸ್​ಮನ್​ ರಿತೇಶ್​ರನ್ನು ಮದುವೆಯಾದಾಗಿನಿಂದ ಅವರ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡದ ರಾಖಿ ಇದೀಗ ಅವರೊಂದಿಗೆ ಬಿಗ್​ ಬಾಸ್​​ನ ಭೂತಗಾಜಿನ ಮೂಲಕ ಕಾಣಿಸಿಕೊಳ್ಳಲಿದ್ದಾರೆ. "ಈ ಬಾರಿ ನಾನು ಸೊಸೆಯಾಗಿ, ಧರ್ಮಪತ್ರಿಯಾಗಿ, ಸಂಗಾತಿಯಾಗಿ ಮತ್ತು ಕಲಾವಿದೆಯಾಗಿ ಪಾಲ್ಗೊಳ್ಳುತ್ತಿದ್ದೇನೆ. ಜನತೆಯ ಮತ್ತು ಮಾಧ್ಯಮದ ಪ್ರೀತಿಯೊಂದಿಗೆ ಟ್ರೋಫಿ ನನ್ನದಾಗಿಸಿಕೊಳ್ಳಲು ಇಚ್ಛಿಸುತ್ತೇನೆ" ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net