ಸಿಸಿಬಿ ಕಚೇರಿಗೆ ಆಗಮಿಸಿದ ರಾಗಿಣಿ ...

Ragini Dwivedi - New
Published on

ಸ್ಯಾಂಡಲ್​ವುಡ್​ ನಟಿ ರಾಗಿಣಿ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಇದೀಗ ಅವರನ್ನು ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ. ಈಗಾಗಲೇ ಕಚೇರಿಗೆ ಆಗಮಿಸಿರುವ ರಾಗಿಣಿ ಅವರನ್ನು ಅಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತದೆ.

ಇದಕ್ಕೂ ಮುನ್ನ, ಇಂದು ಬೆಳಿಗ್ಗೆ ಯಲಹಂಕದ ಜ್ಯುಡಿಷಿನಲ್‌ ಲೇಔಟ್​ನಲ್ಲಿರುವ ರಾಗಿಣಿಯವರ ಅಪಾರ್ಟ್ಮೆಂಟ್​ಗೆ ಸರ್ಚ್​​ ವಾರೆಂಟ್​ನೊಂದಿಗೆ ತೆರಳಿ ಶೋಧಕಾರ್ಯ ನಡೆಸಿದ್ದ ಪೊಲೀಸರು, ರಾಗಿಣಿ ಅವರ ಮೊಬೈಲ್​, ಕಾರ್​ ಮತ್ತು ಮನೆಯ ಕೀಗಳನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ರಾಗಿಣಿ ಹೆಸರಿನಲ್ಲಿರುವ ಆಸ್ತಿ-ಪಾಸ್ತಿಯ ಕುರಿತಾಗಿ ಕಾರ್ಯಾಚರಣೆ ಮಾಡಿದ್ದಾರೆ.

ಡ್ರಗ್ಸ್​ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್​ನನ್ನು ಬುಧವಾರ ಬಂಧಿಸಿದ್ದ ಪೊಲೀಸರು ಆತನನ್ನು ಸಾಕಷ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಈ ಸಂಬಂಧ ರಾಗಿಣಿ ಅವರನ್ನು ವಶಕ್ಕೆ ಪಡೆದು ಇದೀಗ ಸಿಸಿಬಿ ಕಚೇರಿಗೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net