ಮಕ್ಕಳ ಸೈನ್ಯದ ಜತೆ ರಾಧಿಕಾ ಪಂಡಿತ್ ಜಾಲಿ ಮೂಡ್!

288692948_569799234509665_3002485572393629163_n
Published on

ತಮ್ಮ ಮಕ್ಕಳಾದ ಆರ್ಯಾ ಮತ್ತು ಯಥರ್ವ ಜತೆ ಇತರ ಮಕ್ಕಳೊಂದಿಗೆ ರಾಧಿಕಾ ಪಂಡಿತ್ ಗೋವದಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಆ ಫೋಟೋಗಳನ್ನು ಜಾಲತಾಣದಲ್ಲಿ ಶೇರ್ ಮಾಡಿ, ಮಕ್ಕಳ ದರ್ಬಾರ್, ಮಕ್ಕಳ ಪಾರ್ಟಿ ಎಂದು ಬರೆದುಕೊಂಡಿದ್ದಾರೆ.

ಪ್ರತಿ ಬಾರಿಯೂ ಬೇರೆ ಸ್ಥಳಗಳಿಗೆ ಭೇಟಿ ನೀಡಿದಾಗ ಆ ಸಂಭ್ರಮವನ್ನು ರಾಧಿಕಾ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಬೀಚ್ ದಂಡೆಯಲ್ಲಿ ಆಟ ಆಡುತ್ತಿರುವುದನ್ನು ಮತ್ತು ಜೋಕಾಲಿಯಲ್ಲಿ ಜೀಕುತ್ತಿರುವುದನ್ನು ಅವರು ಪೋಸ್ಟ್ ಮಾಡಿದ್ದಾರೆ. ಮಕ್ಕಳ ಪಾರ್ಟಿ ಹೇಗಿತ್ತು ಎನ್ನುವುದನ್ನು ಅವರು ಫೋಟೋಗಳ ಮೂಲಕವೇ ವಿವರಿಸುತ್ತಾ ಹೋಗಿದ್ದಾರೆ.

ಮೊನ್ನೆಯಷ್ಟೇ ಪತಿ ಯಶ್ ಅವರ ಜತೆ ಮಕ್ಕಳನ್ನೂ ಕರೆದುಕೊಂಡು ಹೋಗಿ ಕನಕಪುರ ಸಮೀಪದ ಮಿನಿ ಪಕ್ಷಿಗಳ ಧಾಮದಲ್ಲಿ ಕೆಲ ಕ್ಷಣಗಳನ್ನು ರಾಧಿಕಾ ಕಳೆದಿದ್ದರು. ಗಿಣಿಗಳ ಜೊತೆ ಆಟವಾಡುವ ಫೋಟೋಗಳನ್ನು ಅವರು ಶೇರ್ ಮಾಡಿದ್ದರು. ಇದೀಗ ಗೋವಾದಲ್ಲಿ ಮಕ್ಕಳೊಂದಿಗೆ ಕಳೆದ ಕ್ಷಣಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net