ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ನಟ ಅರ್ಜುನ್ ಸರ್ಜಾ ಅವರ ಮುಂಬರುವ 'ಒಪ್ಪಂದ' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಆರಂಭದಲ್ಲಿ 'ಕಾಂಟ್ರಾಕ್ಟ್' ಎಂಬ ಹೆಸರು ಈ ಸಿನಿಮಾಗೆ ನೀಡಲಾಗಿದ್ದು, ಬಳಿಕ ಹೆಸರನ್ನು ಬದಲಾಯಿಸಲಾಗಿತ್ತು. ಈಗ, ಈ ಸಿನಿಮಾ ಫೆಬ್ರವರಿ 11 ರಂದು ತೆರೆಗಪ್ಪಳಿಸಲಿದೆ. ಅಂದಹಾಗೆ, ಸಮೀರ್ ನಿರ್ದೇಶನದ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಚಿತ್ರರಂಡವೇ ಹಂಚಿಕೊಂಡಿದೆ.