97 ಬಾರಿ ಡಾರ್ಲಿಂಗ್​ಗೆ ಮುತ್ತಿಟ್ಟ ಪೂಜಾ; ಕಾಲ ಬರೆದ ಚಂದಮಾಮನ ಕಥೆ 'ರಾಧೆ ಶ್ಯಾಮ್'!

Published on
ಒಂದು ಸಿನಿಮಾ ಸೂಪರ್ ಹಿಟ್ ಆಗಲು ಕಾರಣ ಅಂದರೆ ಅದು ಹೀರೋ ಮತ್ತು ಹೀರೋಯಿನ್ ಅಂತ ಹೇಳುವುದರಲ್ಲಿ ತಪ್ಪಿಲ್ಲ. ಇದೇ ಕಾರಣಕ್ಕೆ, ಪ್ಯಾನ್ ಇಂಡಿಯನ್ ಸಿನಿಮಾ 'ರಾಧೆ ಶ್ಯಾಮ್' ಎಲ್ಲರ ಗಮನ ಸೆಳೆದಿದೆ. ಹೌದು, ಸೌತ್​ನ ಡಾರ್ಲಿಂಗ್ ಪ್ರಭಾಸ್ ಮತ್ತು ಬುಟ್ಟ ಬೊಮ್ಮ ನಟಿ ಪೂಜಾ ಹೆಗ್ಡೆ ಮೊದಲ ಬಾರಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿರುವ ಸಿನಿಮಾ 'ರಾಧೆ ಶ್ಯಾಮ್'. ಈ ಚಿತ್ರದ ಟ್ರೈಲರ್ ಡಿ.23 ರಂದು ಬಿಡುಗಡೆಯಾಗಿದ್ದು, ರೊಮ್ಯಾಂಟಿಕ್ ಸಿನಿಮಾ ಲವರ್ಸ್ ನಿದ್ದೆ ಗೆಡಿಸಿದೆ ಎಂದು ಹೇಳವುದರಲ್ಲಿ ಅತಿಶಯೋಕ್ತಿ ಇಲ್ಲ. ಸದ್ಯ, 'ರಾಧೆ ಶ್ಯಾಮ್' ಟ್ರೈಲರ್​ನ ಹೈಲೈಟ್​ಗಳ ಬಗ್ಗೆಯೇ ಚರ್ಚೆ ಜೋರಾಗಿದೆ. ಹಾಗಾದರೆ, ಸಿನಿ ಪ್ರೇಕ್ಷಕರಿಗೆ ಟ್ರೈಲರ್​ನಲ್ಲಿ ಇಷ್ಟವಾದ ಅಂಶಗಳು ಯಾವವು ಅಂತೀರಾ...?
  1. ಮೊದಲ ಬಾರಿಗೆ ಈ ಚಿತ್ರದಲ್ಲಿ ಜ್ಯೋತಿಷಿ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.
  2. 'ಬಾಹುಬಲಿ' ಇಮೇಜ್ ನಿಂದ ಹೊರಬಂದು 'ರಾಧೆ ಶ್ಯಾಮ್'ನಲ್ಲಿ ಮತ್ತೆ ಲವರ್ ಬಾಯ್ ಲುಕ್​​ನಲ್ಲಿ ಮಿಂಚಲಿದ್ದಾರೆ ಡಾರ್ಲಿಂಗ್.
  3. ವಿಕ್ರಮಾದಿತ್ಯ ಪಾತ್ರದಲ್ಲಿ ಡಾರ್ಲಿಂಗ್ ಧರಿಸಿರುವ ಉಡುಪುಗಳು ಈ ಚಿತ್ರದ ದೊಡ್ಡ ಹೈಲೈಟ್ ಎಂದೇ ಹೇಳಬೇಕು. ನಟನ ಉಡುಪುಗಳಿಗೆಂದೇ ಬರೋಬ್ಬರಿ 6 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
  4. ಟ್ರೈಲರ್​​ನಲ್ಲಿ ಕೇಳಿಬಂದ ಡೈಲಾಗ್​ಗಳು ಈಗ ಎಲ್ಲಾ ಲವರ್ಸ್ ಬಾಯಲ್ಲಿ ಕೇಳಿಬರುತ್ತಿವೆ.
  5. ''ಇಂದು, ನಿನ್ನ 97 ಬಾರಿ ಕಿಸ್ ಮಾಡಿದಿನಿ'' ಎಂದು ಸಾರಿ ಸಾರಿ ಹೇಳಿದ ನಟಿ ಪೂಜಾ ಡೈಲಾಗ್, ಡರ್ಲಿಂಗ್ ಪ್ರಭಾಸ್ ಅವರ ಅಭಿಮಾನಿಗಳ ಎದೆ ಬಡಿದ ಹೆಚ್ಚಿಸಿದೆ.
  6. ''ನಿನ್ನದು ಕಾಲ ಬರೆದ ಚಂದಮಾಮನ ಪ್ರೇಮಕಥೆ'' ಅಂತ ಪ್ರಭಾಸ್ ಅವರು ಸಿನಿಮಾದಲ್ಲಿ ಪೂಜಾ ಭವಿಷ್ಯ ನುಡಿದ ಡೈಲಾಗ್ ಬಹುತೇಕ ಎಲ್ಲಾ ಪ್ರೇಮಿಗಳ ಹೃದಯ ಗೆದ್ದಿದೆ ಎನ್ನಬಹುದು.
  7. ಪ್ರೀತಿಗೆ ಬೀಳದೆ ಕೇವಲ ''ಫ್ಲರ್ಟೇಶನ್​ಶಿಪ್'' ನ ಎಂಜಾಯ್ ಮಾಡುವ ವಿಕ್ರಮಾದಿತ್ಯರನ್ನು ತನ್ನ ಪ್ರೀತಿಯ ಬಲೆಯಲ್ಲಿ ಬಿಳಿಸಿಕೊಂಡ ಪ್ರೇರಣಾ (ಪೂಜಾ), ನಂತರ ವಿಧಿ ಬರಹವನ್ನು ಹೇಗೆ ಎದುರಿಸುತ್ತಾರೆ ಎಂಬುದು ಕಥೆಯ ಕುತೂಹಲಕಾರಿ ಅಂಶವಾಗಿದೆ.
  8. 3:05 ಸೆಕೆಂಟ್ ಇರುವ ಟ್ರೈಲರ್​​ನಲ್ಲಿ ನಟ ಪ್ರಭಾಸ್ 0.39 ಸೆಕೆಂಡ್ ಬಳಿ ಕಣ್ಣು ಹೊಡೆಯುವ ದೇಶ್ಯ ಎಲ್ಲಾ ಹೆಣ್ಣುಮಕ್ಕಳನ್ನು ಮಂತ್ರಮುಗ್ಧರನ್ನಾಗಿಸುತ್ತೆ.
  9. 0.50 ಸೆಕೆಂಡ್ ಬಳಿ ಪೂಜಾ, ಪ್ರಭಾಸ್ ಒಟ್ಟಿಗೆ ಆಕಳಿಸುವ ದೃಶ್ಯ ಕೂಡ ಬಹಳಷ್ಟು ಮುದ್ದಾಗಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಿದೆ.
  10. 1.58 ಸೆಕೆಂಡ್​ಗಳ ಬಳಿ ಟ್ರೈಲರ್​​ನಲ್ಲಿ ಪ್ರಭಾಸ್ ಪೂಜಾ ಕೈಗೆ ಮುತ್ತಿಟ್ಟ ದೃಶ್ಯ, ಸಿನಿಮಾ ರಿಲೀಸ್ ಆದಾಗ ಥಿಯೇಟರ್​ಗಳಲ್ಲಿ ಎಲ್ಲರ ಶಿಳ್ಳೆಗಳನ್ನು ಪಡೆಯುವುದು ಪಕ್ಕಾ.
  11. ''ಪ್ರೀತಿ ಮಾಡುವುದು ಸುಲಭ; ಆದರೆ ಆ ಪ್ರೀತಿಯನ್ನು ಗಿಟ್ಟಿಸಿಕೊಳ್ಳಲು ಯುದ್ಧಗಳನ್ನೇ ಮಾಡಬೇಕು'' ಎಂದು ರೋಮಿಯೋ ಶೈಲಿಯಲ್ಲಿ ಡಾರ್ಲಿಂಗ್ ಟ್ರೈಲರ್​ನಲ್ಲಿ ಒಂದು ಕಡೆ ಕೊಟ್ಟ ವಾಯ್ಸ್ ಓವರ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಇನ್ನೂ ಹೆಚ್ಚಿಸಿದೆ.
  12. ಟ್ರೈಲರ್​ನ ಕೊನೆಯ ಭಾಗದಲ್ಲಿ ಮುಳುಗಿದ ''ಡಾವಿಂಚಿ'' ಹಡಗಿನ ದೃಶ್ಯ ''ಟೈಟಾನಿಕ್'' ಚಿತ್ರವನ್ನು ನೆನಪಿಸುತ್ತಿದೆ.
  13. ''ಒಬ್ಬ ವ್ಯಕ್ತಿಯಲ್ಲಿ ಜೀವ ತುಂಬಿದ ಪ್ರೀತಿ, ಅದೇ ವ್ಯಕ್ತಿಯ ಜೀವವನ್ನು ತೆಗೆಯುತ್ತಾ'' ಎಂಬ ಪ್ರಶ್ನೆಯೊಂದಿಗೆ ಮುಗಿಯುವ ಸಿನಿಮಾದ ಟ್ರೈಲರ್ ವೀಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿ, ಚಿತ್ರ ನೋಡಲು ಕಾತುರರನ್ನಾಗಿಸಿದೆ.
  14. ಚಿತ್ರದಲ್ಲಿ ನಟ ಮತ್ತು ನಟಿಯ ಪುನರ್ಜನ್ಮದ ಅಂಶಗಳನ್ನು ಸಹ ಟ್ರೈಲರ್​ನಲ್ಲಿ ಹೈಲೈಟ್ ಮಾಡಲಾಗಿದೆ.    

5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾದ ಟ್ರೈಲರ್ ಈಗಾಗಲೇ, ಐದೂ ಭಾಷೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಲಭಿಸಿದೆ. ಚಿತ್ರದ ತೆಲುಗು ಟ್ರೈಲರ್​​ಗೆ​ 15 ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 9 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳು ಲಭಿಸಿವೆ. ಬರೋಬ್ಬರಿ 350 ಕೋಟಿ ರೂ. ಗಳಲ್ಲಿ ಮೂಡಿಬಂದ ಈ ದೊಡ್ಡ ಬಜೆಟ್ ಸಿನಿಮಾ ಜನವೆರಿ.14.2022 ರಂದು ತೆರೆಗೆ ಅಪ್ಪಳಿಸಲಿದೆ. 'ರಾಧೆ ಶ್ಯಾಮ್' ಚಿತ್ರಕ್ಕೆ 'RRR' ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಕಾಂಪಿಟಿಷನ್ ನೀಡಲಿದೆ. 'RRR' ಸಿನಿಮಾ ಜನವೆರಿ.7.2022 ರಂದು ಬಿಡುಗಡೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net