230 ಕೋಟಿ ರೂಪಾಯಿಗೆ ಮಾರಾಟವಾದ ರಾಧೆ

Ullasa Salman
Published on

ಸಲ್ಮಾನ್ ಖಾನ್ ಅಭಿನಯದ ‘ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರವು ಸಿನಿಮಾ ವ್ಯಾಪಾರದಲ್ಲೇ ಹೊಸ ದಾಖಲೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲೇ ಇದುವರೆಗೂ ಯಾವೊಂದು ಚಿತ್ರದ ಹಕ್ಕುಗಳೂ ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾದ ಉದಾಹರಣೆಯಿರಲಿಲ್ಲ. ಇದೀಗ, ‘ರಾಧೆ’ ಚಿತ್ರದ ವಿತರಣೆ, ಸ್ಯಾಟಲೈಟ್, ಡಿಜಿಟಲ್ ಮತ್ತು ಸಂಗೀತದ ಹಕ್ಕುಗಳನ್ನು 230 ಕೋಟಿ ರೂಗಳನ್ನು ಕೊಟ್ಟು ಜೀ ಸ್ಟುಡಿಯೋಸ್ ಕೊಂಡುಕೊಂಡಿದೆ.

ಸಾಮಾನ್ಯವಾಗಿ ಒಂದು ಚಿತ್ರದ ವಿತರಣೆ, ಸ್ಯಾಟಲೈಟ್, ಡಿಜಿಟಲ್ ಮತ್ತು ಸಂಗೀತದ ಹಕ್ಕುಗಳನ್ನು ಬೇರೆಬೇರೆ ಸಂಸ್ಥೆಗಳು ಖರೀದಿಸುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಜೀ ಸ್ಟುಡಿಯೋಸ್ ಸಂಸ್ಥೆಯು ಒಂದು ಚಿತ್ರದ ಸಂಪೂರ್ಣ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ‘ರಾಧೆ’ ಚಿತ್ರದಲ್ಲಿ ಸಲ್ಮಾನ್ ಖಾನ್​ಗೆ ನಾಯಕಿಯಾಗಿ ದಿಶಾ ಪಟಾಣಿ, ರಣದೀಪ್ ಹೂಡಾ, ಜಾಕಿ ಶ್ರಾಫ್ ಮುಂತಾದವರು ನಟಿಸಿದ್ದು, ಪ್ರಭುದೇವ ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net