ಭೀಕರ ಅಪಘಾತದಿಂದ ಸಂಪೂರ್ಣ ಚೇತರಿಸಿಕೊಂಡ ಬೆನ್ನಲ್ಲೇ ಬೋಲ್ಡ್​ ಫೋಟೋ ಹರಿಬಿಟ್ಟ ಯಶಿಕಾ!

Yashika 000
Published on

ಚೆನ್ನೈ: ಕಾಲಿವುಡ್​ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಈಗಷ್ಟೇ ತಾನೇ ಸಹಜ ಜೀವನಕ್ಕೆ ಮರಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಯಶಿಕಾ ಅಪಘಾತದ ನಂತರ ಸಾಕಷ್ಟು ದಿನಗಳ ಕಾಲ ಜಾಲತಾಣದಿಂದ ದೂರ ಉಳಿದಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿರುವ ಯಶಿಕಾ ಮತ್ತೆ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದು, ಮತ್ತೆ ಬಣ್ಣದ ಜಗತ್ತಿನ ಕಡೆ ಗಮನ ಹರಿಸುತ್ತಿದ್ದಾರೆ.

ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಿದ್ದು, ನಟಿ ಯಶಿಕಾ ಅವರು ಬೇಸಿಗೆಯ ದುಃಖ ಎಂಬ ಅಡಿಬರಹದೊಂದಿಗೆ ಹಾಟ್​ ಫೋಟೋವನ್ನು ಹರಿಬಿಡುವ ಮೂಲಕ ಬೇಸಿಗೆ ಕಾಲವನ್ನು ಬರ ಮಾಡಿಕೊಂಡಿದ್ದಾರೆ. ಫೋಟೋಗಳು ವೈರಲ್​ ಆಗಿದ್ದು, 1.5 ಲಕ್ಷಕ್ಕೂ ಹೆಚಚು ಲೈಕ್ಸ್​ ಬಂದಿದ್ದು, ಯಶಿಕಾ ಹಾಟ್​ನೆಸ್​ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 22 ವರ್ಷದ ಯಶಿಕಾ, ಎಸ್​.ಜೆ. ಸೂರ್ಯ ಅಭಿನಯದ "ಕಡಮೈಯೆ ಸೈ" ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net