ನಿಮ್ಮ ವಿಡಿಯೋ ಕಳುಹಿಸಿ ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್​ ಕೊಟ್ಟ ಉತ್ತರ ಹೀಗಿತ್ತು...

Yashika Anand
Published on

ಚೆನ್ನೈ: ಕಾಲಿವುಡ್​ನ ವಯಸ್ಕರ ಕಾಮಿಡಿ ಚಿತ್ರ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಈಗಷ್ಟೇ ತಾನೇ ಸಹಜ ಜೀವನಕ್ಕೆ ಮರಳುತ್ತಿದ್ದಾರೆ.

ಅಪಘಾತದ ಬಳಿಕ ಯಶಿಕಾ ಅವರು ಅನೇಕ ಸರ್ಜರಿಗೆ ಒಳಗಾಗಬೇಕಾಯಿತು. ಸದ್ಯ ಗುಣಮುಖರಾಗಿರುವ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಸೂಕ್ಷ್ಮತೆ ಅರಿಯದ ನೆಟ್ಟಿಗನೊಬ್ಬ ನಿಮ್ಮ ಅಪಘಾತದ ವಿಡಿಯೋವನ್ನು ಕಳುಹಿಸಿ ನಾನು ಅದನ್ನು ಪೋಸ್ಟ್​ ಮಾಡಿ, ಜಾಲತಾಣದಲ್ಲಿ ಕಂಪನ ಸೃಷ್ಟಿಸುತ್ತೇನೆಂದು ಕೇಳಿದ್ದಾನೆ. ಅದರ ಸ್ಕ್ರೀನ್​ಶಾಟ್​ ಅನ್ನು ಯಶಿಕಾ ಹಂಚಿಕೊಂಡಿದ್ದಾರೆ.

ನೆಟ್ಟಿಗನಿಗೆ ಪ್ರತಿಕ್ರಿಯೆ ನೀಡಿರುವ ಯಶಿಕಾ ನೀನು ಜನಿಸಿದ ವಿಡಿಯೋವನ್ನು ಕಳುಹಿಸು, ನಾನು ಅದನ್ನು ಪೋಸ್ಟ್​ ಮಾಡಿ ಕಂಪನವನ್ನು ಸೃಷ್ಟಿ ಮಾಡಿಕೊಡುತ್ತೇನೆಂದು ತಿರುಗೇಟು ನೀಡಿದ್ದಾರೆ. ಯಶಿಕಾ ಅವರ ಹೇಳಿಕೆಗೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net