

ಮುಂಬೈ: ಬಾಲಿವುಡ್ ನಟಿ ಹಾಗೂ ಫ್ಯಾಶನ್ ಐಕಾನ್ ನೋರಾ ಫತೇಹಿ ತಮ್ಮ ಹಾಟ್ ಆ್ಯಂಡ್ ಬೋಲ್ಡ್ ಲುಕ್ನಿಂದಲೇ ಸುದ್ದಿಯಾದವರು. ಕೆನಡಿಯನ್ ಮೂಲದ ನೋರಾ ಬಾಲಿವುಡ್ನಲ್ಲಿ ತಮ್ಮ ಮಾದಕತೆಯಿಂದಲೇ ಮಿಂಚು ಹರಿಸುತ್ತಿದ್ದು, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
ಸದಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ತಮ್ಮ ಮೈಮಾಟ ಪ್ರದರ್ಶಿಸುವಂತಹ ಉಡುಪು ಧರಿಸಿ ಕ್ಯಾಮರಾಗೆ ಪೋಸ್ ನೀಡುವ ನೋರಾ, ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ. ಅದೇ ರೀತಿ ನಿನ್ನೆಯು ಕೂಡ ಮುಂಬೈ ಬೀದಿಯಲ್ಲಿ ಕಾಣಿಸಿಕೊಂಡ ನೋರಾ ತಮ್ಮ ಎದೆ ಸೀಳು ಕಾಣುವಂತಹ ಕಟೌಟ್ ಡ್ರೆಸ್ ಧರಿಸಿ ಎಲ್ಲರ ಕಣ್ಣನ್ನು ತಮ್ಮತ್ತ ಸೆಳೆದುಕೊಂಡರು.
ಕ್ಯಾಮರಾಮನ್ಗಳು ನೋರಾ ಅವರ ಮಾದಕ ನೋಟವನ್ನು ಸೆರೆಹಿಡಿಯಬೇಕಾದರೆ, ನೋರಾ ಅವರಿಗೆ ತಮ್ಮ ಉಡುಗೆಯಿಂದ ಕೊಂಚ ಮುಜುಗರ ಅನುಭವಿಸಿದರು. ಇದು ಅವರ ಹಾವಾಭಾವದಿಂದಲೇ ತಿಳಿಯಿತು. ಪ್ರತಿ ಬಾರಿ ಪೋಸ್ ಕೊಡುವಾಗ ತಮ್ಮ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಿದ್ದರು.
ಮಾದಕ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಗಳು ಹರಿದುಬರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ. ನೋರಾ ಅವರ ಮಾದಕ ಫೋಟೋ ನೋಡಿ ನೆಟ್ಟಿಗರು ಕಳೆದುಹೋಗಿದ್ದಾರೆ. (ಏಜೆನ್ಸೀಸ್)