ಬೈಕ್​ ಏರಿ ಇಂದೋರ್​ ಸುತ್ತಾಡಿದ ವಿಕ್ಕಿ ಕೌಶಲ್​-ಸಾರಾ ಅಲಿ ಖಾನ್​ ವಿರುದ್ಧ ಹೊಸ ವರ್ಷದಂದೇ ದೂರು ದಾಖಲು!

Sara Ali khan
Published on

ಮುಂಬೈ: ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಬಾಲಿವುಡ್​ ನಟ ವಿಕ್ಕಿ ಕೌಶಾಲ್ ಮತ್ತು ನಟಿ ಸಾರಾ ಅಲಿ ಖಾನ್​ ವಿರುದ್ಧ ದೂರು ದಾಖಲಿಸಿದ್ದಾರೆ. ಸಿನಿಮಾದಲ್ಲಿ ಅಕ್ರಮವಾಗಿ ತನ್ನ ಬೈಕ್​ ನಂಬರ್​ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಂದೋರ್​ ನಿವಾಸಿ ಜೈ ಸಿಂಗ್​ ಯಾದವ್​, ಸಿನಿಮಾದಲ್ಲಿ ಬಳಸಲಾಗಿರುವ ಬೈಕ್​ನಲ್ಲಿರುವ ನಂಬರ್​ ನನ್ನ ಬೈಕ್​ ನಂಬರ್​ ಆಗಿದೆ. ಅದು ಸಿನಿಮಾ ತಂಡಕ್ಕೆ ತಿಳಿದಿದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ. ಆದರೆ, ಅವರು ನಂಬರ್​ ಬಳಸಿಕೊಂಡಿರುವುದು ಅಕ್ರಮ ಎಂದು ನಿನ್ನೆ (ಜ.1) ನೀಡಿದ ದೂರಿನಲ್ಲಿ ಉಲ್ಲೇಖಸಿದ್ದಾರೆ.

ನನ್ನ ಅನುಮತಿ ಇಲ್ಲದೇ ಅವರು ನನ್ನ ನಂಬರ್​ ಬಳಸಿಕೊಂಡಿದ್ದಾರೆ. ನಾನು ಪೊಲೀಸ್​ ಠಾಣೆಗೆ ದೂರು ನೀಡಿದ್ದೇನೆ. ಈ ಸಂಬಂಧ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಿದರು.

ಪ್ರಕರಣ ಸಂಬಂಧ ಮಾತನಾಡಿರುವ ಇಂದೋರ್​ನ ಸಬ್​ ಇನ್ಸ್​ಪೆಕ್ಟರ್​ ರಾಜೇಂದ್ರ ಸೋನಿ, ದೂರನ್ನು ಸ್ವೀಕರಿಸಿದ್ದೇನೆ. ಅವರು ನಂಬರ್​ ಪ್ಲೇಟ್​ ಅಕ್ರಮವಾಗಿ ಬಳಸಿದ್ದಾರೆಯೇ ಎಂದು ನೋಡುತ್ತೇವೆ. ಬಳಿಕ ಮೋಟಾರು ವಾಹನ ಕಾಯ್ದೆಯ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಮ್ಮ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ವಿಕ್ಕಿ ಮತ್ತು ಸಾರಾ ಇತ್ತೀಚೆಗಷ್ಟೇ ಇಂದೋರ್​ನಲ್ಲಿ ಕಾಣಿಸಿಕೊಂಡಿದ್ದರು. ಮದುವೆ ಬಳಿಕ ವಿಕ್ಕಿ ಮತ್ತೆ ಸಿನಿಮಾ ಚಟುವಟಿಕೆಯತ್ತ ಗಮನ ಹರಿಸಿದ್ದಾರೆ. ಕೊನೆಯದಾಗಿ ಸರ್ದಾರ್​ ಉಧಮ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಸಾರಾ ಕೂಡ ಕೊನೆಯದಾಗಿ ಅತ್ರಂಗಿ ರೇ ಚಿತ್ರದಲ್ಲಿ ನಟಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net