ಟಾಪ್​ ಧರಿಸದೇ ಬೀದಿಗಿಳಿದ ಉರ್ಫಿ ಜಾವೇದ್​: ನಟಿಯ ಹಾಟ್​ ಅವತಾರ ಕಂಡು ದಾರಿಹೋಕರು ಶಾಕ್​!

Urfi
Published on

ಮುಂಬೈ: ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್‌ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್‌ ಕೂಡ ಒಬ್ಬಳು. ತಾನು ತೊಡುವ ಡ್ರೆಸ್‌ಗಳಿಂದಲೇ ಟ್ರೋಲ್‌ ಆಗುವ ಈಕೆ ಬಾಲಿವುಡ್​ ಟಿಲಿ ವಿಷನ್​ ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ.

ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ.

ಇತ್ತೀಚೆಗೆ ಅವರು ತೊಟ್ಟಿದ್ದ ಉಡುಗೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟಾಪ್​ ಧರಿಸದೇ ಬೀದಿಗೆ ಇಳಿಯುವ ಮೂಲಕ ಹಲವರ ಹುಬ್ಬೇರಿಸಿದ್ದಾರೆ. ಈ ಬಾರಿ ಬ್ರ್ಯಾಲೆಟ್ ಅಥವಾ ಕ್ರಾಪ್ ಟಾಪ್ ಧರಿಸಿಲ್ಲ. ಟಾಪ್ ಬದಲು ಕೊರಳಿಗೆ ಹಲವು ಚೈನ್ ಗಳನ್ನು ಹಾಕಿಕೊಂಡು ಬೀದಿಯಲ್ಲಿ ಓಡಾಡಿದ್ದಾರೆ. ಅದರಲ್ಲೂ ಉರ್ಫಿ ಧರಿಸಿರುವ ಚೈನ್​​ಗಳಿಗೂ ಬೀಗ ಹಾಕಿರುವುದು ಕುತೂಹಲ ಮೂಡಿಸಿದೆ.

ಉರ್ಫಿ ಕುತ್ತಿಗೆಗೆ ಧರಿಸಿರುವ ಸರಪಳಿಗಳು ಗುಲಾಬಿ, ನೀಲಿ ಮತ್ತು ಕಪ್ಪು ಬಣ್ಣಗಳ ಅನೇಕ ಲಾಕ್‌ಗಳು ಮತ್ತು ಸೇಫ್ಟಿ ಪಿನ್‌ಗಳನ್ನು ಹೊಂದಿವೆ. ಟಾಪ್ ಬದಲಿಗೆ ಅವಳ ಕುತ್ತಿಗೆಗೆ ಬೀಗಗಳು ಮತ್ತು ಚೈನ್‌ಗಳನ್ನು ಧರಿಸಿ, ಉರ್ಫಿ ಬಿಕಿನಿ ಬಾಟಮ್‌ನೊಂದಿಗೆ, ನೆಟೆಡ್ ಸ್ಕರ್ಟ್ ಅನ್ನು ಧರಿಸಿ ಪೋಸ್​ ನೀಡಿದ್ದಾರೆ.

ಉರ್ಫಿ ಜಾವೇದ್ ಅವರ ಈ ಲುಕ್ ನೋಡಿದ ನಟಿ ಟಾಪ್ ಬದಲು ಕೊರಳಿಗೆ ಚೈನ್, ಬೀಗ ಹಾಕಿಕೊಂಡು ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದಾರೆ ಎನ್ನಬಹುದು. ಸ್ಟೈಲ್ ಮತ್ತು ಬೋಲ್ಡ್ ಫ್ಯಾಶನ್ ವಿಷಯಕ್ಕೆ ಬಂದರೆ, ಈ ವಿಷಯದಲ್ಲಿ ಉರ್ಫಿಗೆನ ಯಾರು ಸಾಟಿ ಇಲ್ಲ ಎನ್ನಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net