ಗಣೇಶ ಹಬ್ಬದಂದೇ ಮೆಗಾಸ್ಟಾರ್​ ಕುಟುಂಬಕ್ಕೆ ಶಾಕ್​: ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಸ್ಥಿತಿ ಗಂಭೀರ​

Sai Dharam Tej
Published on

ಹೈದರಾಬಾದ್​: ಖ್ಯಾತ ತೆಲಗು ನಟ ಸಾಯಿ ಧರಮ್ ತೇಜ್ ಅವರು ಹೈದರಾಬಾದ್​ನ ಮಾದಾಪುರದ ಬಳಿ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ (ಸೆ.10) ಸಂಜೆ ಈ ಘಟನೆ ನಡೆದಿದೆ.

ತೀವ್ರ ಗಾಯಗಳು ಆಗಿರುವುದರಿಂದ ಧರಮ್​ ತೇಜ್​ ಅವರನ್ನು ಮೊದಲು ಮೆಡಿ ಕವರ್ ಆಸ್ಪತ್ರೆಗೆ ತೆರಳಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ ಧರಮ್​ ತೇಜ್​, ಮೆಗಾಸ್ಟಾರ್ ಚಿರಂಜೀವಿ ಅವರ ತಂಗಿಯ ಮಗ.

ಶುಕ್ರವಾರ ಸಂಜೆ ಧರಮ್​ ತೇಜ್​ ಅವರು ತನ್ನ Triumph Sports ಬೈಕ್​​​ನಲ್ಲಿ ಜುಬ್ಲಿ ಹಿಲ್ಸ್​ನಿಂದ ಗಾಚಿಬೌಲಿ ಕಡೆ ಹೋಗುತ್ತಿದ್ದರು. ರಸ್ತೆಯ ಮೇಲೆ ಮರಳು ಇದ್ದಿದ್ದರಿಂದ ಬೈಕ್ ಕಂಟ್ರೋಲ್ ತಪ್ಪಿ ಸ್ಕಿಡ್ ಆಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.

ಅಪಘಾತದಿಂದಾಗಿ ಧರಮ್​ ತೇಜ್​ ಅವರಿಗೆ ಕ್ಲಾವಿಕಲ್ ಮೂಳೆ ಮುರಿತ ಮತ್ತು ತಲೆ ಹಾಗೂ ಎದೆಗೆ ತೀವ್ರ ಗಾಯಗಳು ಆಗಿದ್ದರೂ, ಪ್ರಾಣಕ್ಕೆ ಯಾವುದೇ ಕುತ್ತು ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.

ನಟ ಸಾಯಿ ಅವರನ್ನು ನೋಡಲು ನಟ ಚಿರಂಜೀವಿ, ನಟ ಪವನ್ ಕಲ್ಯಾಣ್, ನಟ ವೈಷ್ಣವ ತೇಜ್, ಅಲ್ಲು ಅರವಿಂದ್ ಮತ್ತು ಇತರ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಘಟನೆ ಸಂಬಂಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net