ಖಂಡಿತ ಅದು ಸಮಂತಾನೇ... ಮಾಧ್ಯಮದವರ ಈ ಪ್ರಶ್ನೆಗೆ ಮಾಜಿ ಪತ್ನಿಯ ಹೆಸರನ್ನೇ ಉತ್ತರಿಸಿದ ನಾಗಚೈತನ್ಯ!

Samantha
Published on

ಹೈದರಾಬಾದ್​: ನಟ ನಾಗಚೈತನ್ಯ ತಮ್ಮ ಬಂಗಾರರಾಜು ಚಿತ್ರದ ಪ್ರಚಾರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೋದಲೆಲ್ಲ ಅವರ ಸಿನಿಮಾಗಿಂತ ವೈಯಕ್ತಿಕ ಬದುಕಿನ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ. ಮಾಜಿ ಪತ್ನಿ ಸಮಂತಾ ಬಗ್ಗೆಯೇ ಕೇಳಲಾಗುತ್ತಿದೆ. ಆದರೆ, ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದ ನಾಗಚೈತನ್ಯ ಪ್ರಬುದ್ಧತೆಯಿಂದ ಮಾತನಾಡುವ ಮೂಲಕ ಇರುಸು-ಮುರುಸು ಮಾಡಿಕೊಳ್ಳದೇ ಜಾಣತನ ಮೆರೆಯುತ್ತಿದ್ದಾರೆ.

ಇತ್ತೀಚೆಗೆ ಬಾಲಿವುಡ್​ ಮಾಧ್ಯಮಗಳಿಗೆ ನಾಗಚೈತನ್ಯ ಸಂದರ್ಶನವನ್ನು ನೀಡಿದರು. ಈ ವೇಳೆ ಕೇಳಲಾದ ಕೆಲ ತಮಾಷೆಯ ಪ್ರಶ್ನೆಗಳಿಗೆ ತಮಾಷೆಯಾಗೇ ನಾಗಚೈತನ್ಯ ಉತ್ತರ ನೀಡಿದರು. ಇದುವರೆಗೂ ತೆರೆಯ ಮೇಲೆ ಯಾವ ಹೀರೋಯಿನ್​ ಜತೆ ನೀವು ಲವ್ಲಿ ಕೆಮಿಸ್ಟ್ರಿ ಹಂಚಿಕೊಂಡಿದ್ದೀರಿ ಎಂದು ಪ್ರಶ್ನಿಸಲಾಯಿತು.

ಖಂಡಿತ ಸಮಂತಾ ಹೆಸರನ್ನು ನಾಗಚೈತನ್ಯ ಹೇಳುವುದಿಲ್ಲ ಅಂತಾ ಅನೇಕರು ಅಂದುಕೊಂಡಿದ್ದರು. ಆದರೆ, ಅವರ ಊಹೆ ಸುಳ್ಳಾಯಿತು. ಏಕೆಂದರೆ, ನಾಗಚೈತನ್ಯ ತೆಗೆದುಕೊಂಡ ಹೆಸರು ತಮ್ಮ ಮಾಜಿ ಪತ್ನಿ ಸಮಂತಾರದ್ದು. ಅನೇಕ ಚಿತ್ರಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದು ತೆರೆಯ ಮೇಲೆ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್​ ಆಗಿದೆ ಎಂದರು.

ಇದೇ ವೇಳೆ ಡಿವೊರ್ಸ್​ ಕುರಿತು ಕೇಳಲಾದ ಪ್ರಶ್ನೆಗೆ ಇಬ್ಬರು ಪರಸ್ಪರ ಒಪ್ಪಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಿಂದ ಇಬ್ಬರು ಸಂತೋಷವಾಗಿದ್ದೇವೆ ಎಂದು ಹೇಳಿದರು. ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮವನ್ನು ಹೇಗೆ ನಿಭಾಯಿಸುತ್ತೀರಾ ಎಂದು ಪ್ರಶ್ನಿಸಿದಾಗ, ಅವರು ಪ್ರತಿಕ್ರಿಯಿಸಬೇಡಿ ಮತ್ತು ಕೆಲ ವಿಷಯಗಳು ಸ್ವಯಂಚಾಲಿತವಾಗಿ ಸರಿ ಹೋಗುತ್ತವೆ ಎಂದು ಹೇಳಿದರು.

ವೈಯಕ್ತಿಕ ಜೀವನದ ಬಗ್ಗೆ ಎದುರಾಗುತ್ತಿರುವ ಸಾಲು ಸಾಲು ಪ್ರಶ್ನೆಗಳನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿರುವ ನಾಗಚೈತನ್ಯರ ಪ್ರಬುದ್ಧತೆಯನ್ನು ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net