ನಿಮಗೆ ಇದುವರೆಗೂ ಎಷ್ಟು ಬ್ರೇಕಪ್​ ಆಗಿದೆ ಎಂದು ಪ್ರಶ್ನಿಸಿದವನಿಗೆ ನಟಿ ಶ್ರುತಿ ಕೊಟ್ಟ ಉತ್ತರ ಹೀಗಿತ್ತು...

Shruti Hassan
Published on

ಚೆನ್ನೈ: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸುದ್ದಿಯಾಗಿದ್ದಾರೆ. ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಶ್ರುತಿ, ಶಂತನು ಹಜಾರಿಕಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ.

ಇನ್ನು ಶ್ರುತಿ ಸಾಮಾಜಿಕ ಜಾಲತಾಣದಲ್ಲೂ ಸಕ್ರೀಯರಾಗಿದ್ದು, ನೆಟ್ಟಿಗರು ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಲೇ ಇರುತ್ತಾರೆ. ಅದೇ ರೀತಿಯ ನೆಟ್ಟಿಗರೊಬ್ಬರು ವೈಯಕ್ತಿಕ ಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ಶ್ರುತಿ ಖಾರವಾಗಿಯೇ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಶ್ರುತಿ ಅವರ ಬ್ರೇಕಪ್​ ಸಂಖ್ಯೆಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಅದಕ್ಕೆ ಶ್ರುತಿ ಏನು ಉತ್ತರಿಸಿದ್ದಾರೆಂದು ನೋಡಣ ಬನ್ನಿ...

ನಿಮಗೆ ಇದುವರೆಗೂ ಎಷ್ಟು ಬ್ರೇಕಪ್​ ಆಗಿದೆ ಎಂದು ಪ್ರಶ್ನೆ ಕೇಳಿದ ನೆಟ್ಟಿಗನಿಗೆ ಮರು ಪ್ರಶ್ನಿಸಿದ ಶ್ರುತಿ, ನೀವು ಎಷ್ಟು ಗರ್ಲ್​ಫ್ರೆಂಡ್​ ಹೊಂದಿದ್ದೀರಾ? ನನಗನಿಸುತ್ತೆ ನಿಮಗೆ ಶೂನ್ಯ ಅಥವಾ ಅರ್ಧ ಗರ್ಲ್​ಫ್ರೆಂಡ್​ ಇರಬಹುದು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಇನ್ನು ಕಳೆದ ತಿಂಗಳು ಮಂದಿರಾ ಬೇಡಿ ಟಾಕ್​ ಶೋನಲ್ಲಿ ಶ್ರುತಿ ತಮ್ಮ ಲವ್​ ಲೈಫ್​ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ಶಂತನು ಜತೆ ತಮ್ಮ ಸಂಬಂಧವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರುತಿ, ನಾನು ಹಿಂದೆ ಸಾಕಷ್ಟು ವಿಷಯಗಳನ್ನು ಮುಚ್ಚಿಟ್ಟಿದ್ದೇನೆ. ಆದರೆ, ನಾನು ತುಂಬಾ ನಿರ್ದಿಷ್ಟವಾಗಿದ್ದೇನೆ. ಬಹಳ ಸಮಯದವರೆಗೆ ನಾನು ಒಂಟಿಯಾಗಿದ್ದೆ. ಏಕೆಂದರೆ ಜನರು ಆ ರೀತಿ ಕಾಣಿಸಿಕೊಳ್ಳಲು ಬಯಸುತ್ತಿದ್ದರು. ಆದರೆ, ಈ ರೀತಿ ಪ್ರೀತಿಯನ್ನು ಮುಚ್ಚಿಡುವುದು ನನ್ನ ಜೀವನ ಪಾಲುದಾರನಿಗೆ ನಾನು ತೋರುತ್ತಿರುವ ಅಗೌರವ ಎಂದು ಭಾವಿಸಿದೆ. ಹಾಗೆಯೇ ನಿಮ್ಮ ಪರಿಸರ ಮತ್ತು ಅದರಲ್ಲಿರುವ ಜನರನ್ನು ಗೌರವಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶ್ರುತಿ ಕೊನೆಯದಾಗಿ ವಕೀಲ್​ ಸಾಬ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಪ್ರಭಾಸ್​ ನಟನೆಯ ಸಲಾರ್ ಚಿತ್ರದಲ್ಲಿ ಶ್ರುತಿ ನಾಯಕಿಯಾಗಿದ್ದಾರೆ. ಚಿತ್ರವೂ 2022ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net