ಬಿಗ್​ಬಾಸ್​ನಿಂದ ಹೊರಬಂದ ಬೆನ್ನಲ್ಲೇ ಪ್ರೇಯಸಿ ದೀಪ್ತಿ ಸುನೈನಾಗೆ ಶಾಕ್​ ಕೊಟ್ಟ ಷಣ್ಮುಖ​ ಜಸ್ವಂತ್!​

Deepti
Published on

ಹೈದರಾಬಾದ್​: ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್ ಆಗಿರುವ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಇದೀಗ ಜಗಜ್ಜಾಹೀರಾಗಿದೆ. ಅದನ್ನು ಸ್ವತಃ ಷಣ್ಮುಖ್​ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದಾರೆ.

ಶಾನು ಬಿಗ್​​ಬಾಸ್​ ಮನೆಯಲ್ಲಿರುವಾಗ ಆತನಿಗೆ ವೋಟ್​ ಮಾಡುವಂತೆ ಅಭಿಮಾನಿಗಳ ಬಳಿ ದೀಪ್ತಿ ಕೇಳಿಕೊಳ್ಳುತ್ತಿದ್ದರು. ಒಂದೆ ಶಾನುಗೆ ಇರುವ ಖ್ಯಾತಿ ಮತ್ತು ದೀಪ್ತಿಯ ಸಾಕಷ್ಟು ಪ್ರಯತ್ನದ ನಡುವೆಯೂ ಶಾನು ಮಾತ್ರ ಬಿಗ್​ಬಾಸ್​ 5 ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಗೆ ಮೊದಲನೇಯ ರನ್ನರ್​ ಅಪ್​ ಆಗಿ ಉಳಿದರು.

ಶಾನು ಅವರನ್ನು ಹಿಂದಿಕ್ಕಿ ವಿಜೆ ಸನ್ನಿ ತೆಲುಗಿನ ಬಿಗ್​ಬಾಸ್​ 5 ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಆದರೂ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಶಾನು ಧನ್ಯವಾದ ತಿಳಿಸಿದ್ದಾರೆ. ಆದರೆ, ಶಾನು ತನ್ನ ಪ್ರೇಯಸಿ ದೀಪ್ತಿ ಬಗ್ಗೆ ಈವರೆಗೂ ಮಾತನ್ನು ಆಡಿಲ್ಲ. ಸಾಕಷ್ಟು ಬೆಂಬಲ ನೀಡಿದ ದೀಪ್ತಿ ಬಗ್ಗೆ ಒಂದು ಮಾತನ್ನು ಆಡದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ದೀಪ್ತಿಯನ್ನು ಶಾನು ನಿರ್ಲಕ್ಷಿಸುತ್ತಿರುವಂತೆ ಕಾಣುತ್ತಿದೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಲ್ಲಿ ಶಾನು ಕ್ಯಾಪ್ಟನ್​ ಆದ ನಂತರ ನೆಡೆದ ಎಪಿಸೋಡ್​ನಲ್ಲಿ ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿದ ದೀಪ್ತಿ ತುಂಬಾ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ. ಆದರೆ, ಇದೀಗ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿರುವುದನ್ನು ನೋಡಿದರೆ ಅನುಮಾನ ದಟ್ಟವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net