ಸ್ಯಾಂಡಲ್​ವುಡ್​ಗೆ ಮತ್ತೊಂದು ಆಘಾತ: ಯುದ್ಧಕಾಂಡ ಖ್ಯಾತಿಯ ಹಿರಿಯ ನಿರ್ದೇಶಕ ಕೆವಿ ರಾಜು ಇನ್ನಿಲ್ಲ

KV Raju
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ವರ್ಷದ ಕೊನೆಯಲ್ಲಿ ಮತ್ತೊಂದು ಆಘಾತವಾಗಿದೆ. ಹಿರಿಯ ನಿರ್ದೇಶಕ ಕೆ.ಜಿ. ರಾಜು ಅವರು ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆ.ವಿ. ರಾಜು ಅವರು ಇಂದು (ಡಿ.24) ಬೆಳಗ್ಗೆ ರಾಜಾಜಿನಗರದ ಮನೆಯಲ್ಲಿ ವಿಧಿವಶರಾಗಿದ್ದಾರೆ.

ಕೆ.ವಿ. ರಾಜು ಅವರು ಜಗ್ಗೇಶ್, ಶಶಿಕುಮಾರ್ ಸೇರಿದಂತೆ ಹಲವು ಪ್ರತಿಭೆಗಳಿಗೆ ಜೀವನ ಕೊಟ್ಟಂತಹ ನಿರ್ದೇಶಕರು. ಸಂಭಾಷಣೆಕಾರರಾಗಿ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕೆವಿ ರಾಜು, ಯದ್ಧಕಾಂಡ, ಸಂಗ್ರಾಮ ಮತ್ತು ಸುಂದರಕಾಂಡ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net