ಮೋಹಕ ತಾರೆ ಜತೆಗಿರುವ ಯುವಕನ್ಯಾರು? ಮತ್ತೊಮ್ಮೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ನಟಿ ರಮ್ಯಾ!

Ramya
Published on

ಬೆಂಗಳೂರು: ಸ್ಯಾಂಡಲ್​ವುಡ್​ ಮೋಹಕ ತಾರೆ ರಮ್ಯಾ ಮತ್ತೊಮ್ಮೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಬಾರಿ ರಮ್ಯಾ ಅವರು ವಿವಾದಕ್ಕೆ ಗುರಿಯಾಗದೇ ವೈಯಕ್ತಿಕ ವಿಚಾರಕ್ಕೆ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದಿದ್ದಾರೆ. ಯುವಕನೊಬ್ಬನ ಜತೆಯಲ್ಲಿ ರಮ್ಯಾ ಅವರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

ವೀಕೆಂಡ್​ ಫೋಟೋ ಇದಾಗಿದ್ದು, ಪೋಟೋ ವೈರಲ್ ಸೀಕ್ರೇಟ್ ಏನು ಎಂಬ ಪ್ರಶ್ನೆ ಉದ್ಭವವಾಗಿದೆ. ಕರಣ್ ಜೋಶಿ ಅನ್ನೊ ಹುಡುಗನ ಜೊತೆ ರಮ್ಯಾ ಆತ್ಮೀಯವಾಗಿರುವ ಫೋಟೋ ವೈರಲ್ ಆಗಿದೆ. ಕರಣ್ ಜೋಶಿಯನ್ನು ರಮ್ಯಾ ತಬ್ಬಿಕೊಂಡಿರುವ ಫೋಟೋ ಇದೀಗ ಎಲ್ಲರ ಚರ್ಚೆಯ ವಿಷಯವಾಗಿದೆ.

ರಮ್ಯಾ ಫ್ಯಾನ್ಸ್ ಪೇಜ್​ನಲ್ಲೂ ಈ ಫೋಟೋ ಬಾರಿ ಚರ್ಚೆಗೆ ಗ್ರಾಸವಾಗಿದೆ. ರಮ್ಯಾ ಸದ್ದಿಲ್ಲದೇ ಸುದ್ದಿ ಕೊಡ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ. ಸ್ಯಾಂಡಲ್​ವುಡ್ ನಲ್ಲಿ ಕಂಬ್ಯಾಕ್ ಪ್ಲಾನ್ ಹೇಳ್ತಾರಾ ಅಥವಾ ಇನ್ನೇನಾದ್ರು ಸರ್ಪ್ರೈಸ್​ ಕೊಡ್ತಾರಾ? ಅಥವಾ ಸಿನಿಮಾಗಾಗಿ ಏನಾದರೂ ಪ್ಲಾನ್ ಮಾಡಿದ್ದಾರಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿನ ಪೋಟೋಗೆ ರಮ್ಯಾ ಉತ್ತರ ಏನು ಅನ್ನೋ ಕುತೂಹಲವೂ ಹೆಚ್ಚಾಗಿದ್ದು, ಅಭಿಮಾನಿಗಳ ಪ್ರಶ್ನೆಗೆ ರಮ್ಯಾ ಏನು ಉತ್ತರ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net