ಡಿವೋರ್ಸ್​ ಆದ ಬಹುದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡ ಸಮಂತಾ-ನಾಗಚೈತನ್ಯ!

Samantha
Published on

ಹೈದರಾಬಾದ್​: ಸಮಂತಾ ಮತ್ತು ನಾಗಚೈತನ್ಯ ಕಳೆದ ಅಕ್ಟೋಬರ್​ 2ರಂದೇ ಡಿವೋರ್ಸ್​ ಪಡೆದುಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇಬ್ಬರು ಬೇರೆಯಾಗಿ ಮೂರು ತಿಂಗಳು ಸಮೀಪಿಸುತ್ತಿದ್ದರೂ, ಮಾಜಿ ತಾರಾದಂಪತಿ ಬಗೆಗಿನ ಚರ್ಚೆ ಮಾತ್ರ ಇನ್ನು ಕಡಿಮೆಯಾಗಿಲ್ಲ. ಚಾಯ್​ಸ್ಯಾಮ್​ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ತಾಜಾ ಬೆಳವಣಿಗೆಯಂದರೆ ಡಿವೋರ್ಸ್​ ಪಡೆದಾಗಿನಿಂದ ಇದೇ ಮೊದಲ ಬಾರಿಗೆ ಒಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೈದರಾಬಾದ್​ನ ರಾಮನಾಯ್ಡು ಸ್ಟುಡಿಯೋದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಅಂದರೆ ಇಬ್ಬರು ಜತೆಯಾಗಿ ಅಲ್ಲ. ಒಂದೇ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಬಂಗಾರರಾಜು ಸಿನಿಮಾದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದರೆ, ಸಮಂತಾ ತಮ್ಮ ಯಶೋಧ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಎರಡು ಚಿತ್ರದ ಚಿತ್ರೀಕರಣ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಿತು.

ಇಬ್ಬರು ಒಂದೇ ಶೂಟಿಂಗ್​ ಸ್ಥಳದಲ್ಲಿರುವುದು ಇಬ್ಬರಿಗೂ ತಿಳಿದಿತ್ತು. ಆದರೂ ಪರಸ್ಪರ ಇಬ್ಬರು ಮಾತನಾಡದೇ ತಮ್ಮ ತಮ್ಮ ಕೆಲಸ ಮುಗಿಸಿಕೊಂಡು ಕಾರನ್ನೇರಿ ಹೊರಟು ಹೋದರು ಎಂದು ತಿಳಿದುಬಂದಿದೆ.

ಡಿವೋರ್ಸ್​ ಆದಾಗಿನಿಂದ ಇಬ್ಬರು ಸುದ್ದಿಯಲ್ಲಿದ್ದಾರೆ. ಇಬ್ಬರ ಡಿವೋರ್ಸ್​ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇಬ್ಬರು ಬೇರೆಯಾಗದಂತೆ ಅಭಿಮಾನಿಗಳು ಸಾಕಷ್ಟು ಮನವಿಗಳನ್ನು ಮಾಡಿಕೊಂಡರೂ ಕೂಡ ಇಬ್ಬರು ತಮ್ಮ ನಿಲುವುವನ್ನು ಬದಲಿಸಿದೇ ಅಕ್ಟೋಬರ್​ 2ರಂದು ಡಿವೋರ್ಸ್​ ಘೋಷಿಸಿದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಮಂತಾ ಶಾಕುಂತಲ ಚಿತ್ರವನ್ನು ಮುಗಿಸಿದ್ದು, ಯಶೋಧ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್​ಗೆ ಹೆಜ್ಜೆ ಹಾಕುವ ಮೂಲಕ ಭಾರಿ ಸುದ್ದಿಯಾಗಿದ್ದು, ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ. ಇನ್ನು ನಾಗಚೈತನ್ಯ ಬಂಗಾರರಾಜು ಸಿನಿಮಾದ ಶೂಟಿಂಗ್​ ಮುಗಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ, ಆಮೀರ್​ ಖಾನ್​ ನಟನೆಯ ಲಾಲ್​ ಸಿಂಗ್​ ಛಡ್ಡ ಸಿನಿಮಾದಲ್ಲೂ ನಾಗಚೈತನ್ಯ ನಟಿಸಿದ್ದು, ಮೊದಲ ಬಾರಿಗೆ ಬಾಲಿವುಡ್​ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರ ಏಪ್ರಿಲ್​ 14ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net