1999ರಲ್ಲಿ ಮದುವೆಗೆ ಇನ್ನು 5 ದಿನಗಳು ಬಾಕಿ ಇರುವಾಗಲೇ ಸಲ್ಮಾನ್​ ಖಾನ್​ ಮನಸ್ಸು ಬದಲಿಸಿದ್ದೇಕೆ?

SALMAN KHAN
Published on

ಮುಂಬೈ: ಬಾಲಿವುಡ್‌ನ ಮೋಸ್ಟ್ ಬ್ಯಾಚುಲರ್ ಎಂದರೆ ನಟ ಸಲ್ಮಾನ್ ಖಾನ್. ಅವರಿಗೀಗ 55 ವರ್ಷ ವಯಸ್ಸು. ಸಲ್ಮಾನ್ ಖಾನ್ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಂದು ಕಾಲದಲ್ಲಿ ಸಲ್ಮಾನ್ ಮದುವೆಯ ವಿಚಾರ ಬಹಳವಾಗಿ ಚರ್ಚೆಯಲ್ಲಿತ್ತು. ಅನೇಕ ನಟಿಯರ ಜೊತೆ ಸಲ್ಮಾನ್ ಹೆಸರು ಕೇಳಿ ಬಂದಿದ್ದು ಕೂಡಾ ಸುಳ್ಳಲ್ಲ. ಆದರೆ ಇದುವರೆಗೂ ಸಲ್ಮಾನ್ ಖಾನ್ ಮದುವೆಯಾಗಿಲ್ಲ.

ಶಾಕಿಂಗ್ ವಿಚಾರ ಎಂದರೆ ಒಂದು ಕಾಲದಲ್ಲಿ ಸಲ್ಮಾನ್ ಮದುವೆಗೆ ಎಲ್ಲಾ ಸಿದ್ದತೆಗಳು ನಡೆದಿತ್ತು. ಇನ್ನೇನು ಮಾಡುವೆ ಆಗಬೇಕು ಎನ್ನುವಷ್ಟರಲ್ಲಿ ಸಲ್ಮಾನ್ ತಮ್ಮ ಮನಸ್ಸು ಬದಲಾಯಿಸಿದ್ದರಂತೆ. ಈ ವಿಚಾರವನ್ನು ದಿ ಕಪಿಲ್ ಶರ್ಮಾ ಶೋ ನಲ್ಲಿ ಈ ವಿಚಾರವನ್ನು ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಬಹಿರಂಗಪಡಿಸಿದ್ದಾರೆ.

1999ರಲ್ಲಿ ಸಲ್ಮಾನ್ ಖಾನ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಇಬ್ಬರು ಒಂದೇ ದಿನ ಮದುವೆಯಾಗಲು ನಿರ್ಧರಿಸಿದ್ದರಂತೆ. ಇವರ ಮದುವೆಗೆ ಎಲ್ಲಾ ಸಿದ್ದತೆಗಳು ನಡೆದಿತ್ತು. ಆಮಂತ್ರಣ ಪತ್ರಿಕೆಯನ್ನು ಕೂಡಾ ಹಂಚಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಲ್ಮಾನ್ ಖಾನ್ ಮಾತ್ರ ತಮ್ಮ ಮನಸ್ಸು ಬದಲಿಸಿಬಿಟ್ಟರು. ಮದುವೆ ನಿರ್ಧಾರದಿಂದ ಹಿಂದೆ ಸರಿದರು. ಹೀಗಾಗಿ ಕೊನೆಯ ಕ್ಷಣದಲ್ಲಿ ಮದುವೆ ರದ್ದಾಯಿತು ಎಂದಿದ್ದಾರೆ.

ಮದುವೆಯ ಸಿದ್ದತೆಗಳು ನಡೆದಿತ್ತು. ಮದುವೆಗೆ ಇನ್ನೇನು 5 ದಿನಗಳು ಇರಬೇಕು ಎನ್ನುವಷ್ಟರಲ್ಲಿ ಸಲ್ಮಾನ್ ಮದುವೆಯಾಗುವ ಮನಸ್ಸಿಲ್ಲ ಎಂದಿದ್ದರು. ಬೇರೆ ದಾರಿಯಿಲ್ಲದೆ ಸಾಜಿದ್ ಅದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದರು. ಆದರೆ ಮದುವೆ ದಿನ ಮಂಟಪಕ್ಕೆ ಬಂದ ಸಲ್ಮಾನ್, ಹಿಂದೆ ಕಾರು ನಿಂತಿದೆ ಈಗಲೂ ಓಡಿ ಹೋಗಬಹುದು ಎಂದು ಸಲಹೆ ನೀಡಿದ್ದರಂತೆ. ಈ ಎಲ್ಲಾ ವಿಚಾರಗಳನ್ನು ಸಾಜಿದ್ ಶೋನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net