ರಜನಿಕಾಂತ್​​ಗಾಗಿ 45 ವರ್ಷಗಳ ಹಿಂದೆಯೇ ಮೊದಲ ಫ್ಯಾನ್ಸ್​ ಕ್ಲಬ್​ ತೆರೆದ ಅಪ್ಪಟ್ಟ ಅಭಿಮಾನಿ ವಿಧಿವಶ

Rajini Fan
Published on

ಚೆನ್ನೈ: ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ಖಳನಾಯಕನಾಗಿ ಸಿನಿಮಾ ಜರ್ನಿ ಆರಂಭಿಸಿದ ಕಾಲದಲ್ಲೇ ಮೊದಲ ಬಾರಿಗೆ ರಜನಿ ಅವರಿಗೆ ಫ್ಯಾನ್ಸ್​ ಕ್ಲಬ್​ ತೆರೆದ ಅವರ ಬಹುದೊಡ್ಡ ಅಭಿಮಾನಿ ಮುತ್ತುಮಣಿ ಇಂದು ವಿಧಿವಶರಾಗಿರುವುದು ಅಭಿಮಾನಿಗಳಿಗೆ ಆಘಾತವಾಗಿದೆ.

ಮದುರೈ ಮೂಲದ ಮುತ್ತುಮಣಿ 45 ವರ್ಷಗಳ ಹಿಂದೆಯೇ ರಜನಿ ಅವರ ಫ್ಯಾನ್ಸ್​ ಕ್ಲಬ್​ ಅನ್ನು ತೆರೆದಿದ್ದರು. ಈ ಸಂದರ್ಭದಲ್ಲಿ ರಜನಿ ಇನ್ನು ಖಳನಾಯಕನಾಗಿಯೇ ಅಭಿನಯಿಸುತ್ತಿದ್ದರು. ಮುತ್ತುಮಣಿಯ ನಂತರವೇ ಇತರರು ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಈ ರೀತಿಯ ಫ್ಯಾನ್ಸ್​ ಕ್ಲಬ್‌ಗಳನ್ನು ಪ್ರಾರಂಭಿಸಿದರು ಮತ್ತು ಇಂದು ಪ್ರತಿ ನಗರ ಮತ್ತು ಹಳ್ಳಿಗಳಲ್ಲಿ ಇಂತಹ ಸಾವಿರಾರು ಕ್ಲಬ್‌ಗಳು ಸಕ್ರಿಯವಾಗಿವೆ.

ಎರಡು ವರ್ಷಗಳ ಹಿಂದೆ ಮುತ್ತುಮಣಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಾಗ ರಜನಿ ಕರೆ ಮಾಡಿ ಮಾತನಾಡಿದ್ದರು. ಶೀಘ್ರ ಗುಣಮಖರಾಗಲು ದೇವರಲ್ಲಿ ಪ್ರಾರ್ಥಿಸುತ್ತಿರುವೆ ಎಂದು ರಜನಿ, ಮುತ್ತುಮಣಿಗೆ ಹೇಳಿದ್ದರು.

ಇನ್ನು ರಜನಿಕಾಂತ್​ ಅವರು ತಮ್ಮ ಅಂಬುಲ್ಲ ರಜನಿಕಾಂತ್​ ಚಿತ್ರದಲ್ಲಿ "ಮುತ್ತುಮಣಿ ಚೌದರೆ ವಾ" ಹಾಡಿನಲ್ಲಿ ಮುತ್ತುಮಣಿ ಹೆಸರನ್ನು ಉಲ್ಲೇಖಿಸುವ ಮೂಲಕ ರಜನಿ ಗೌರವ ಸೂಚಿಸಿದ್ದರು. ಸದ್ಯ ರಜನಿ ಅವರ ಅಪ್ಪಟ್ಟ ಅಭಿಮಾನಿ ವಿಧಿವಶರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಂದೇಶಗಳು ಹರಿದು ಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net