ಟಾಲಿವುಡ್​ನಲ್ಲಿ ಹರಿದಾಡ್ತಿರೋ ಸುದ್ದಿ ಕೇಳಿ ಸುಕುಮಾರ್ ಬಳಿ ದೌಡಾಯಿಸಿ ಮನವಿ ಮಾಡಿಕೊಂಡ ರಶ್ಮಿಕಾ?

Sukumar
Published on

ಹೈದರಾಬಾದ್​: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಪುಷ್ಪ-ದಿ ರೈಸ್​ ಮೊದಲ ಭಾಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ನಟಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ, ಲಕ್ಷಾಂತರ ಸಿನಿ ಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ. ಸಿನಿಮಾ ಕೂಡ ಹಿಟ್​ ಆಗಿದೆ. ಇದೀಗ ಪುಷ್ಪ ಸಿನಿಮಾದ ಎರಡನೇ ಭಾಗದ ಮೇಲೆ ಎಲ್ಲರ ನಿರೀಕ್ಷೆ ಇದೆ. ಇನ್ನೇನು ಶೂಟಿಂಗ್​ ಕೂಡ ಆರಂಭವಾಗಲಿದೆ. ಅದಕ್ಕೂ ಮುನ್ನವೇ ರಶ್ಮಿಕಾ ಕುರಿತಾದ ಒಂದು ಸುದ್ದಿ ಟಾಲಿವುಡ್​ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ.

ಪುಷ್ಪ-2 ಸಿನಿಮಾವನ್ನು ಬ್ಲಾಕ್​ಬಸ್ಟರ್​ ಮಾಡುವ ಉದ್ದೇಶದಿಂದ ಸಿನಿಮಾದ ಸ್ಕ್ರಿಪ್ಟ್​ ಅನ್ನು ಸಾಕಷ್ಟು ಬಾರಿ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಟಾಲಿವುಡ್​ ಸ್ಟಾರ್​ ಡೈರೆಕ್ಟರ್​ ಸುಕುಮಾರ್​ ಸ್ಕ್ರಿಪ್ಟ್​ ಮೇಲೆ ಸಾಕಷ್ಟು ಕೆಲಸ ಮಾಡಿದ್ದು, ಮೂಲ ಸ್ಕ್ರಿಪ್ಟ್​ನಲ್ಲಿ ತುಂಬಾ ಬದಲಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾದ ಮಧ್ಯಂತರ ಭಾಗದಲ್ಲಿ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಪಾತ್ರವನ್ನು ಕೊಲೆ ಮಾಡಿ, ಸೆಕೆಂಡ್​ ಹಾಫ್​ನಲ್ಲಿ ಹೊಸ ನಾಯಕಿಯನ್ನು ತರಲು ಪ್ಲಾನ್​ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರ ರಶ್ಮಿಕಾ, ಕಿವಿಗೆ ಬೀಳುತ್ತಿದ್ದಂತೆ ನಿರ್ದೇಶಕ ಸುಕುಮಾರ್​ ಮನೆಗೆ ಸತ್ಯ ತಿಳಿದುಕೊಳ್ಳಲು ದೌಡಾಯಿಸಿದರು ಎಂದು ಹೇಳಲಾಗಿದೆ.

ಚಿತ್ರದ ಕತೆಯ ಬಗ್ಗೆ ಸುಕುಮಾರ್​ ಯಾವುದೇ ಅಪ್​ಡೇಟ್​ ಅನ್ನು ರಶ್ಮಿಕಾ ಅವರಿಗೆ ನೀಡಿಲ್ಲ. ಆದರೆ, ತನ್ನ ಸುತ್ತ ಕೇಳಿಬರುತ್ತಿರುವ ವಿಚಾರಗಳಿಂದ ಗೊಂದಲಕ್ಕೆ ಒಳಗಾಗಿರುವ ರಶ್ಮಿಕಾ, ಎರಡನೇ ಭಾಗದಲ್ಲಿ ನನ್ನ ಪಾತ್ರವನ್ನು ಕೊಲ್ಲದಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನನ್ನ ಪಾತ್ರಕ್ಕೆ ಇನ್ನಷ್ಟು ಸಮಯ ಕೊಡಿ, ನನ್ನ ನಟನಾ ಕೌಶಲ್ಯವನ್ನು ಪ್ರದರ್ಶಿಸುತ್ತೇನೆಂದು ರಶ್ಮಿಕಾ ಕೇಳಿಕೊಂಡಿದ್ದಾರಂತೆ. ಆದರೆ, ಮೊದಲ ಭಾಗದಲ್ಲೇ ಪುಷ್ಪಾ ಮತ್ತು ಶ್ರೀವಲ್ಲಿ ಅವರ ಪ್ರಣಯವನ್ನು ಪ್ರೇಕ್ಷಕರು ನೋಡಿದ್ದಾರೆ. ಹೀಗಾಗಿ ರಶ್ಮಿಕಾಗೆ ಸುಕುಮಾರ್​ ಮತ್ತೆ ಭರವಸೆ ನೀಡುತ್ತಾರೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಏನಾಗುತ್ತದೆ ಎಂಬುದು ಚಿತ್ರ ಬಿಡುಗಡೆಯಾದಾಗ ತಿಳಿಯುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net