ಕೆರೆಗೆ ಹಾರಿ ಸಾವಿನ ಹಾದಿ ಹಿಡಿದ ನಿರ್ದೇಶಕ ಪುರಿ ಜಗನ್ನಾಥ್​ ಸಹಾಯಕ ನಿರ್ದೇಶಕ ಸಾಯಿ ಕುಮಾರ್​

Puri Jagannatha
Published on

ಹೈದರಾಬಾದ್​: ಸ್ಟಾರ್​ ನಿರ್ದೇಶಕ ಪುರಿ ಜಗನ್ನಾಥ್​ ಅವರ ಸಹಾಯಕ ನಿರ್ದೇಶಕ ಸಾಯಿ ಕುಮಾರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್​ನ ಮಾಧಪುರ್​ ಪೊಲೀಸ್​ ಠಾಣೆ ಬಳಿಯಿರುವ ದುರ್ಗಮ್​ ಕರೆಗೆ ಹಾರಿ ಕೊನೆಯುಸಿರೆಳೆದಿದ್ದಾರೆ.

ಮೊದಲು ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಶವವನ್ನು ವಶಕ್ಕೆ ಪಡೆದು ಒಸ್ಮಾನಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ನಂತರ ನಡೆದ ತನಿಖೆಯ ವೇಳೆ ಮೃತಪಟ್ಟ ವ್ಯಕ್ತಿ ಸಾಯಿ ಕುಮಾರ್​ ಎಂದು ತಿಳಿದುಬಂದಿದೆ.

ಸಾಯಿ ಕುಮಾರ್​ ರಂಗಾರೆಡ್ಡಿ ಜಿಲ್ಲೆಯ ಸೆರಿಲಿಂಗಂಪಲ್ಲಿಯ ಕೊತಗುಡದ ನಿವಾಸಿ ಮತ್ತು ನಿರ್ದೇಶಕ ಪುರಿ ಜಗನ್ನಾಥ್​ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ. ಆರ್ಥಿಕ ಒತ್ತಡ ಎದುರಿಸಲಾಗದೇ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಸಾಯಿ ಕುಮಾರ್​​ ಸಾವಿನ ಹಾದಿ ಹಿಡಿದಿದ್ದಾನೆಂದು ತಿಳಿದುಬಂದಿದೆ.

ಚಿತ್ರರಂಗದಲ್ಲಿ ಹೊಳೆಯುವುದೆಲ್ಲ ಚಿನ್ನವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಲೈಗರ್​ ಸಿನಿಮಾ ಹೀನಾಯವಾಗಿ ಸೋತಿದ್ದರ ಪರಿಣಾಮ ಮುಂಬೈನ ಐಷಾರಾಮಿ ಅಪಾರ್ಟ್​ಮೆಂಟ್​ನಲ್ಲಿ ಉಳಿದುಕೊಂಡಿದ್ದ ಪುರಿ ಜಗನ್ನಾಥ್ ಇದೀಗ ಹೈದರಾಬಾದ್​ಗೆ ಮರಳಿದ್ದಾರೆ. ತಮ್ಮ ಸಿಬ್ಬಂದಿಗೆ ಸಂಬಳ ನೀಡುವ ಸ್ಥಿತಿಯಲ್ಲಿಯೂ ಇಲ್ಲ ಎಂಬ ಸಂಗತಿ ಟಾಲಿವುಡ್​ ಗಲ್ಲಿಯಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net