

ನವದೆಹಲಿ: ತಾರಾ ದಂಪತಿಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಇಂದು ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ಅದಕ್ಕೆ ಕಾರಣ ಇಬ್ಬರ ಕುರಿತಾಗಿ ಎದ್ದಿರುವ ಡಿವೋರ್ಸ್ ವದಂತಿ. ಅದಕ್ಕೆ ಕಾರಣ ಪಿಗ್ಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಜೋನಾಸ್ ಎಂಬ ಸರ್ನೇಮ್ ಅನ್ನು ತೆಗೆದುಹಾಕಿರುವುದು.
ಇದೀಗ ಎಲ್ಲ ಊಹಾಪೋಹಗಳಿಗೆ ಪಿಗ್ಗಿ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಿಕ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಜಿಮ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಸೋಮವಾರದ ಪ್ರೇರಣೆ, ಅದನ್ನು ಪಡೆಯೋಣ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ನಿಕ್, ಬೈಸಿಪ್ಸ್ ವರ್ಕೌಟ್ ಮಾಡುತ್ತಿದ್ದು, ಇದಕ್ಕೆ ಕಾಮೆಂಟ್ ಮಾಡಿರುವ ಪ್ರಿಯಾಂಕಾ, ನಾನು ನಿನ್ನ ತೋಳಿಗಳಲ್ಲಿ ಸತ್ತೆ ಎನ್ನುವ ಮೂಲಕ ನಿಕ್ ಬೈಸಿಪ್ಸ್ ನೋಡಿ ಹುಬ್ಬೇರಿಸಿದ್ದಾರೆ.
ಅಂದಹಾಗೆ ಪ್ರಿಯಾಂಕಾ ಅವರಿಗಿಂತಲೂ ನಿಕ್ ಜೋನಸ್ 11 ವರ್ಷ ಕಿರಿಯರು. ಇದೇ ವಿಚಾರ ಮದುವೆ ಸಮಯದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಯಾವುದೇ ಟೀಕೆಗೂ ಚಿಂತಿಸದ ಪಿಗ್ಗಿ, 2018ರ ಡಿಸೆಂಬರ್ 1ರಂದು ಅಮೆರಿಕ ಪಾಪ್ ಗಾಯಕ ನಿಕ್ ಜೋನಾಸ್ರನ್ನು ಮದುವೆ ಆಗುವ ಮೂಲಕ ಪ್ರೀತಿಗೆ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ತೋರಿಸಿದ್ದರು. ಅಲ್ಲದೆ, ಇಬ್ಬರು ಅನೋನ್ಯವಾಗಿ ಜೀವನ ಸಹ ಸಾಗಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡುತ್ತಾ ಬಂದಿದ್ದಾರೆ.
ಆದರೆ, ಇದೀಗ ಪಿಗ್ಗಿ ಮಾಡಿರುವ ಕೆಲಸ ಅಭಿಮಾನಿಗಳಿಗೆ ಶಾಕ್ ನೀಡಿದೆ. ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಜೋನಾಸ್ ಎಂಬ ಸರ್ನೇಮ್ ಅನ್ನು ತೆಗೆದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಪಿಗ್ಗಿ ಮತ್ತು ನಿಕ್ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಇದೀಗ ಪಿಗ್ಗಿ, ನಿಕ್ ವಿಡಿಯೋಗೆ ಕಾಮೆಂಟ್ ಮಾಡಿದ್ದು, ನಮ್ಮ ನಡುವೆ ಎಲ್ಲವೂ ಸರಿಯಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಆದರೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವವರೆಗೂ ಅಭಿಮಾನಿಗಳಿಗೆ ಸಮಾಧಾನ ಆಗುವುದಿಲ್ಲ.
ಏಕೆಂದರೆ, ಸಮಂತಾ ವಿಚಾರದಲ್ಲೂ ಇದೇ ರೀತಿ ನಡೆದಿರುವುದರಿಂದ ಪಿಗ್ಗಿ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಸಮಂತಾ ಆರಂಭದಲ್ಲಿ ತಮ್ಮ ಸಾಮಾಜಿಕ ಜಾಲತಾಣದಿಂದ ಅಕ್ಕಿನೇನಿ ಸರ್ನೇಮ್ ತೆಗೆದು ಹಾಕಿದ್ದರು. ಬಳಿಕ ಸಮಂತಾ ಮತ್ತು ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಪುಷ್ಠಿ ನೀಡುವಂತಹ ಒಂದಷ್ಟು ಘಟನೆಗಳು ಸಹ ನಡೆದಿತ್ತು. ಕೊನೆಗೆ ಅಕ್ಟೋಬರ್ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್ ಘೋಷಣೆ ಮಾಡಿಯೇ ಬಿಟ್ಟರು. ಪಿಗ್ಗಿ ವಿಚಾರದಲ್ಲೂ ಇದೇ ನಡೆಯುತ್ತಾ ಎಂಬ ಅನುಮಾನ ಹುಟ್ಟುಹಾಕಿದೆ. (ಏಜೆನ್ಸೀಸ್)