

ಹೈದರಾಬಾದ್: ಟಾಲಿವುಡ್ನ ಹಾಟ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ನಟಿ ಪಾಯಲ್ ರಜಪೂತ್ ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ. ಟ್ರೋಲಿಗರು ಮಾಡಿದ ಕೆಲಸದಿಂದಾಗಿ ನನ್ನ ಅಮ್ಮ ನನ್ನನ್ನು ಸಿನಿಮಾ ರಂಗ ಬಿಡುವಂತೆ ಕೇಳುತ್ತಿದ್ದಾರೆ. ನಿಮ್ಮ ಕೀಳು ಮನಸ್ಥಿತಿಯನ್ನು ಪ್ರದರ್ಶಿಸಬೇಡಿ ಎಂದು ಟ್ರೋಲಿಗರಿಗೆ ನಟ ಪಾಯಲ್ ಹೇಳಿದ್ದಾರೆ.
ಅಷ್ಟಕ್ಕೂ ನಟಿ ಪಾಯಲ್ ಟ್ರೋಲಿಗರ ವಿರುದ್ಧ ಯಾಕಿಷ್ಟು ಕೋಪಗೊಂಡಿದ್ದಾರೆ ಅಂದರೆ, ಅದಕ್ಕೆ ಕಾರಣ ಪಾಯಲ್ ಅವರ ಇತ್ತೀಚಿನ ಹಾಟ್ ಫೋಟೋಶೂಟ್ ಬಗ್ಗೆ ಕೇಳಿಬಂದಿರುವ ಕಾಮೆಂಟ್ಗಳು.
ಹೌದು, ಕಳೆದ ವಾರ ಪಾಯಲ್ ರಜಪೂತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ನಟಿ ಪಾಯಲ್ ಬ್ರಾಲೆಸ್ ಆಗಿ ಕಾಣಿಸಿಕೊಂಡು ಫೋಟೋಶೂಟ್ಗೆ ಪೋಸ್ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು ಮತ್ತು ನಟಿಯ ವಿರುದ್ಧ ಸಾಕಷ್ಟು ಕೆಟ್ಟ ಕಾಮೆಂಟ್ಗಳು ಹರಿದುಬಂದಿದ್ದವು.
ಇದೀಗ ಟ್ರೋಲ್ಗಳ ಬಗ್ಗೆ ಕಿಡಿಕಾರಿರುವ ಪಾಯಲ್, ಟ್ರೋಲಿಗರು ಕಳಪೆ ಮನಸ್ಥಿತಿಯವರು ಎಂದು ಜರಿದಿದ್ದಾರೆ. ನನ್ನ ಮೇಲಾಗುತ್ತಿರುವ ಟ್ರೋಲ್ಗಳ ಬಗ್ಗೆ ನನ್ನ ತಾಯಿಗೆ ಚಿಂತೆ ಕಾಡುತ್ತಿದೆ. ಸಿನಿಮಾ ರಂಗವನ್ನು ಬಿಡುವಂತೆ ಕೇಳುತ್ತಿದ್ದಾರೆ. ಆದರೆ, ಯಾರು ಏನೇ ಬಂದರು ನಾನು ಕುಗ್ಗುವುದಿಲ್ಲ. ನಾನು ದೃಢವಾಗಿ ನಿಂತು, ನನಗೆ ಯಾವುದು ಇಷ್ಟವೋ ಅದನ್ನೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಪಾಯಲ್ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಆರ್ಎಕ್ಷ್ 100 ಮತ್ತು ಆರ್ಡಿಎಕ್ಸ್ ಲವ್ ಚಿತ್ರಗಳಲ್ಲಿನ ಬೋಲ್ಡ್ ನಟನೆಯ ಮೂಲಕ ಪಾಯಲ್ ಸಖತ್ ಸುದ್ದಿ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿರುವ ಪಾಯಲ್, ಡಾಲಿ ಧನಂಜಯ ನಟನೆಯ ‘ಹೆಡ್ ಬುಷ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್)