ದೀಪಿಕಾ ಈಗ ಏನು ಮಾಡಿದ್ದಾರೋ ಅದನ್ನು 15 ವರ್ಷದ ಹಿಂದೆಯೇ ನಾನು ಮಾಡಿದ್ದೆ: ಮಲ್ಲಿಕಾರ ನೋವಿನ ಮಾತಿದು

Mallika
Published on

ಮುಂಬೈ: ಮರ್ಡರ್​ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದ ಬೋಲ್ಡ್​ ಬ್ಯೂಟಿ ಮಲ್ಲಿಕಾ ಶೆರಾವತ್ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದು, ತಮ್ಮ ಮುಂದಿನ "ಆರ್​ಕೆ" ಚಿತ್ರದ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ವೃತ್ತಿ ಜೀವನದ ಆರಂಭದಲ್ಲೇ ಮರ್ಡರ್​ ಸಿನಿಮಾದಲ್ಲಿ ಬಿಕಿನಿ ಮತ್ತು ಕಿಸ್ಸಿಂಗ್​ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ಮಲ್ಲಿಕಾ ಶೆರಾವತ್​ ನಟಿಸಿದ್ದರು. ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರಿಂದ ಅನೇಕ ಜನರಿಂದ ಟೀಕೆಗೆ ಗುರಿಯಾಗಿದ್ದರು. ಅಂದು ಅನುಭವಿಸಿದ ನೋವುಗಳನ್ನು ತಮ್ಮ ಆರ್​ಕೆ ಚಿತ್ರದ ಪ್ರಚಾರದ ವೇಳೆ ಮಾಧ್ಯಮಗಳ ಮುಂದೆ ಮಲ್ಲಿಕಾ ಮತ್ತೆ ನೆನಪಿಸಿಕೊಂಡಿದ್ದಾರೆ.

ಗೆಹ್ರಾಯಿಯಾಂ​ ಸಿನಿಮಾದಲ್ಲಿ ದೀಪಿಕಾ ಏನು ಮಾಡಿದ್ದಾರೋ ಅದನ್ನೇ ನಾನು 15 ವರ್ಷಗಳ ಹಿಂದೆಯೇ ಮರ್ಡರ್​ ಸಿನಿಮಾದಲ್ಲಿ ಮಾಡಿದ್ದೆ. ಆದರೆ, ಅಂದು ಜನರು ಒಂದೇ ಚೌಕಟ್ಟಿನಲ್ಲಿ ಯೋಚಿಸುತ್ತಿದ್ದರು. ಕಿಸ್ಸಿಂಗ್​ ಮತ್ತು ಬಿಕಿನಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ನನ್ನ ವಿರುದ್ಧ ಮುಗಿಬಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲೇ ಇರುವ ಕೆಲವು ಮಂದಿ ನನಗೆ ಕಿರುಕುಳ ನೀಡಿದರು. ನಟನೆ ಎಂದರೆ ಕೇವಲ ಗ್ಲಾಮರ್ ಅಲ್ಲ ಎಂದು ಬಹಳಷ್ಟು ಜನ ಕಿಡಿಕಾರಿದರು. ದಶಾವತಾರಂ, ಪ್ಯಾರ್ಕಿ ಸೈಡ್​ ಎಫೆಕ್ಟ್ಸ್​ ಮತ್ತು ವೆಲ್​ಕಮ್​ ಚಿತ್ರಗಳನ್ನು ಮಾಡಿದರೂ ಯಾರೊಬ್ಬರು ನನ್ನ ನಟನೆಯನ್ನು ಗುರುತಿಸಲಿಲ್ಲ ಎಂದು ಮಲ್ಲಿಕಾ ಹೇಳಿಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಆರ್​ಕೆ ಸಿನಿಮಾ ಇದೇ ತಿಂಗಳು 22 ರಂದು ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದಲ್ಲಿ ಮಲ್ಲಿಕಾ ಶೆರಾವತ್​ ಜತೆಗೆ ಕಬ್ರಾ ಸೇಠ್​, ರಣವೀರ್​ ಶೋರೆ, ಮನು ರಿಶಿಖಾದ್ದ, ಚಂದ್ರಚೂರ್​ ರಾಯ್​ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net