ಭಾರತೀಯ ಅಂಚೆಯಿಂದ ಕಿಚ್ಚನಿಗೆ ಬಹು ದೊಡ್ಡ ಗೌರವ: ಮೈ ಸ್ಟಾಂಪ್ ಮೇಲೆ ವಿಕ್ರಾಂತ್​ ರೋಣನ ಭಾವ ಚಿತ್ರ!

My Stamp
Published on

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯಕ್ಕೆ ಮನಸೋಲದವರಿಲ್ಲ. ಇತ್ತೀಚೆಗಷ್ಟೇ 50ನೇ ವಸಂತಕ್ಕೆ ಕಾಲಿಟ್ಟ ಕಿಚ್ಚನಿಗೆ ಅಭಿಮಾನದ ಜತೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತು. ಕೇವಲ ನಟನೆ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಿಂದಲೂ ಜನರ ಪ್ರೀತಿಗಳಿಸಿರುವ ಸ್ವಾತಿಮುತ್ತಿಗೆ ಇದೀಗ ಭಾರತೀಯ ಅಂಚೆಯಿಂದಲೂ ಬಹು ದೊಡ್ಡ ಸನ್ಮಾನ ದೊರೆತಿದೆ.

ಭಾರತೀಯ ಅಂಚೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಭಾವಚಿತ್ರ ಮೂಡಿದೆ. ಮೈ ಸ್ಟಾಂಪ್ ಮೇಲೆ ಕಿಚ್ಚನ ಭಾವ ಚಿತ್ರ ಹಾಕುವ ಮೂಲಕ ಸಕಲಕಲಾವಲ್ಲಭನಿಗೆ ಭಾರತೀಯ ಅಂಚೆ ಗೌರವ ಸಲ್ಲಿಸಿದೆ. ಕನ್ನಡ ಚಿತ್ರರಂಗದ ಅಂಚೆ‌ ಸ್ಟಾಂಪ್ ಮೇಲೆ ಸುದೀಪ್ ಫೋಟೋ ಹಾಕಲಾಗಿದೆ.

ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯ ಸಮಾಜಮುಖಿ‌ ಕೆಲಸ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆ‌ಗೆ ಸುದೀಪ್​ ಅವರಿಗೆ ಸಿಕ್ಕ ಗೌರವ ಇದಾಗಿದೆ. ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಕ್ರಿಕೆಟಿಗ, ಬರಹಗಾರ, ಗಾಯಕ ಹಾಗೂ ಅತ್ಯುತ್ತಮ ಬಾಣಸಿಗನಾಗಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಚಾಪು ಮೂಡಿಸಿರುವ ನಟ ಕಿಚ್ಚ ಸುದೀಪ್​ ಕನ್ನಡ ಚಿತ್ರರಂಗದ ಹೆಮ್ಮೆ ಆಗಿದ್ದಾರೆ.

ಎರಡು ಗ್ರಾಮಗಳ ದತ್ತು ಹಾಗೂ ಅನೇಕ ಕನ್ನಡ ಶಾಲೆಗಳ ಉಳುವಿಗೆ ತಮ್ಮ ಚಾರಿಟೇಬಲ್ ಸೊಸೈಟಿಯ ಮೂಲಕ ಶ್ರಮಿಸುತ್ತಿರುವ ಕಿಚ್ಚ, ಕರೊನಾ ಕಷ್ಟಕಾಲದಲ್ಲಿ ಕಿಚ್ಚನ ಕೈತುತ್ತಿನ ಮೂಲಕ ಹಸಿದವರ ಹೊಟ್ಟೆಯನ್ನು ತುಂಬಿಸಿದ್ದಾರೆ. ಎಷ್ಟು ಜನರ ಚಿಕಿತ್ಸೆಗೆ ಹಣದ ಹಣದ ನೆರವು ನೀಡಿದ್ದು ಅಪರೂಪದ ವ್ಯಕ್ತಿತ್ವ ಎಂಬುದನ್ನು ಸಾಬೀತು ಮಾಡಿದ್ದಾರೆ. ಇಂತಹ ಪರಿಪೂರ್ಣ ನಟನಿಗೆ ಭಾರತೀಯ ಅಂಚೆ ಮೈ ಸ್ಟಾಂಪ್ ಮೇಲೆ ಅವರ ಭಾವ ಚಿತ್ರ ಹಾಕುವ ಮೂಲಕ ಗೌರವ ಸೂಚಿಸಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net