ಬಿಗ್​ಬಾಸ್​ ಸೀಸನ್​ 9ರ ಆರಂಭ ಯಾವಾಗ? ಸುಳಿವು ನೀಡಿದ ಕಿಚ್ಚ ಸುದೀಪ್​

BBK8
Published on

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದಾದ ಬಿಗ್​ಬಾಸ್​ ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಿಗ್​ಬಾಸ್​ ಸೀಸನ್​ 8 ಕಳೆದ ಆಗಸ್ಟ್​ನಲ್ಲಿ ಮುಕ್ತಾಯಗೊಂಡಿತ್ತು. ಇದೀಗ ಸೀಸನ್​ 9ರ ತಯಾರಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ.

ಊಹಪೋಹಗಳ ನಡುವೆ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್​ ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ ಕಾರ್ಯಕ್ರಮ ಯಾವಾಗ ಪ್ರಾರಂಭವಾಗಲಿದೆ ಎಂಬುದರ ಬಗ್ಗೆ ಸಣ್ಣು ಸುಳಿವು ನೀಡಿದ್ದರು. ಬಹುಶಃ 2022ರ ಜನವರಿಯಲ್ಲಿ 9ನೇ ಸೀಸನ್​ ಪ್ರಾರಂಭವಾಗಲಿದೆ ಎಂದಿದ್ದರು. ಆದರೆ, ಕರೊನಾ ಮೂರನೇ ಅಲೆ ಭೀತಿ ಎದುರಾಗಿದ್ದು, ಯಾವುದೇ ಅಡೆತಡೆಯಿಲ್ಲದೇ ಅಂದುಕೊಂಡಂತೆ ಎಲ್ಲವೂ ನಡೆದರೆ ಜನವರಿಯಿಂದಲೇ 9ನೇ ಸೀಸನ್​ ಆರಂಭವಾಗಲಿದೆ.

ಈಗಾಗಲೇ ಕಿರುತೆರೆ ಲೋಕದ ಪ್ರಮುಖ ಸೆಲಿಬ್ರಿಟಿಗಳನ್ನು ಕಾರ್ಯಕ್ರಮ ಆಯೋಜಕರು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾರ್ಯಕ್ರಮಕ್ಕೂ ಮುನ್ನ ಈ ರೀತಿಯ ಸುದ್ದಿ ಹರಿದಾಡುವುದು ಸಾಮಾನ್ಯವಾಗಿದ್ದು, ಈ ಬಾರಿಯ ಬಿಗ್​ಬಾಸ್​ ಕಾರ್ಯಕ್ರಮದಲ್ಲಿ ಯಾರು ಯಾರು ಇರುತ್ತಾರೆ ಎಂಬ ಕುತೂಹಲಕ್ಕೆ ಶೋ ಶುರುವಾದಗಲೇ ಉತ್ತರ ಸಿಗುತ್ತದೆ.

ಸೀಸನ್​ 8 ಬಿಗ್​ಬಾಸ್​ ರಿಯಾಲಿಟಿ ಶೋ ಇತಿಹಾಸದಲ್ಲೇ ವಿಭಿನ್ನತೆಗೆ ಸಾಕ್ಷಿಯಾಯಿತು. ಕರೊನಾ ಎರಡನೇ ಅಲೆಯಿಂದ 75 ದಿನಗಳಿಗೆ ಮೊಟಕುಗೊಂಡಿದ್ದ ಶೋ ಮತ್ತೆ ಆರಂಭವಾಗಿ ತನ್ನ ವಿಭಿನ್ನತೆಗೆ ಭರ್ಜರಿ ಟಿಆರ್​ಪಿ ಗಳಿಸಿಕೊಂಡಿತ್ತು. ಕಿರುತೆರೆ ಲೋಕದಲ್ಲೇ ದಾಖಲೆ ಟಿಆರ್​ಪಿ ದಾಖಲಿಸಿತು. ಈ ಸೀಸನ್​ನಲ್ಲಿ ಮಜಾಭಾರತ ಖ್ಯಾತಿಯ ಲ್ಯಾಗ್​ ಮಂಜು ಗೆಲುವು ದಾಖಲಿಸಿದರು. ಅರವಿಂದ್​ ಕೆ.ಪಿ. ರನ್ನರ್​ ಅಪ್​ ಆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net