ಜೂನಿಯರ್​​ ಚಿರುಗೆ 'ರಾಯನ್ ರಾಜ್ ಸರ್ಜಾ' ಎಂದು ನಾಮಕರಣ: ರಾಯನ್​ ಹೆಸರಿನ ಅರ್ಥ ಹೀಗಿದೆ ನೋಡಿ..

Jr Chiru
Published on

ಬೆಂಗಳೂರು: ನಟಿ ಮೇಘನಾ ಕುಟುಂಬದಲ್ಲಿಂದು ಸಂಭ್ರಮ ಮನೆ ಮಾಡಿದೆ. ಏಕೆಂದರೆ ಇಂದು ಜ್ಯೂನಿಯರ್​ ಚಿರುವಿನ ನಾಮಕರಣ. ದಿವಂಗತ ನಟ ಚಿರಂಜೀವಿ ಸರ್ಜಾ ಪುತ್ರನ ಹೆಸರು ಬಹಿರಂಗವಾಗಿದೆ.

ಜ್ಯೂನಿಯರ್​ ಚಿರುಗೆ 'ರಾಯನ್ ರಾಜ್ ಸರ್ಜಾ' ಎಂದು ನಾಮಕರಣ ಮಾಡಲಾಗಿದೆ. ನಗರದ ಖಾಸಗಿ ಹೋಟೆಲ್​ನಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂಭ್ರಮದಲ್ಲಿ ಸರ್ಜಾ ಕುಟುಂಬ ಭಾಗಿಯಾಗಿದೆ.

ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಮೇಘನಾ ರಾಜ್ ಅಜ್ಜಿ ಲಕ್ಷ್ಮಿ ದೇವಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. 10 ತಿಂಗಳ‌ ನಂತರ ಮಗನಿಗೆ ನಾಮಕರಣ ಮಾಡಲಾಗಿದೆ. ನಗರದ ಚಾನ್ಸರಿ ಪೆವಿಲಿಯನ್ ಹೊಟೆಲ್​ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ. ಇಷ್ಟು ದಿನ ಜ್ಯೂ ಚಿರು ಆಗಿದ್ದ ಸರ್ಜಾ ಕುಟುಂಬದ ಕುಡಿ ಇನ್ಮುಂದೆ ರಾಯನ್​ ರಾಜ್​ ಸರ್ಜಾ ಹೆಸರಿನಿಂದ ಚಿರಪರಿಚಿತವಾಗಲಿದೆ.

ಅಂದಹಾಗೆ ಸಂಸ್ಕೃತದಲ್ಲಿ ರಾಯನ್ ಅಂದ್ರೆ ಯುವರಾಜ ಎಂಬ ಅರ್ಥ ಬರುತ್ತದೆ. ನಾಮಕರಣ ಹಿನ್ನೆಲೆಯಲ್ಲಿ ಚಿರು ಕುಟುಂಬದಲ್ಲಿ ಸಂತೋಷ ಇಮ್ಮಡಿಯಾಗಿದ್ದು, ಚಿರು ಮಗುವಿಗೆ ಬಂಧುಬಳಗದವರು ಶುಭ ಹಾರೈಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net