ಬೇಬಿ ಬಂಪ್ ಹಿಡಿದು ನಟಿ ತಾರಾ ಪ್ರತ್ಯಕ್ಷ: ವೈರಲ್​ ಆಗ್ತಿವೆ ಫೋಟೋಗಳು...

1281173
Published on

ಬೆಂಗಳೂರು: ನಟಿ ತಾರಾ ಮತ್ತೊಮ್ಮೆ ಅಮ್ಮ ಆಗಲಿದ್ದಾರಾ? ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲ ಫೋಟೋಗಳನ್ನು ನೋಡಿದರೆ ಅಂತಹ ಅನುಮಾನ ಮೂಡದೇ ಇರದು. ಹೌದು, ರೇಷ್ಮೆ ಸೀರೆಯುಟ್ಟು, ಅಂದವಾಗಿ ಸಿಂಗಾರಗೊಂಡು, ಮಿಲಿಯನ್ ಡಾಲರ್ ನಗು ಬೀರುತ್ತಾ, ಬೇಬಿ ಬಂಪ್ ಹಿಡಿದು ನಿಂತಿರುವ ತಾರಾ ಅನುರಾಧ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈ ಫೋಟೋಗಳನ್ನು ನೋಡಿದವರು 9 ವರ್ಷಗಳ ಬಳಿಕ ತಾರಾ ಅವರು ಮತ್ತೊಮ್ಮೆ ತಾಯಿಯಾಗಲಿದ್ದಾರೆ ಎಂದೇ ಭಾವಿಸಿದ್ದರು. ಸ್ಯಾಂಡಲ್​ವುಡ್​ನ ಸ್ಟಾರ್ ನಾಯಕ, ನಾಯಕಿಯರ ಫೇವರೇಟ್ ಮಮ್ಮಿಗೆ ಹಲವರು ವಿಶ್ ಕೂಡ ಮಾಡಿದ್ದರು.

ಆದರೆ ಅಲ್ಲೇ ಇರೋದು ಕಥೆಯಲ್ಲಿ ಒಂದು ಟ್ವಿಸ್ಟ್. ಯಾಕೆಂದರೆ ತಾರಾ ಅವರು ನಿಜ ಜೀವನದಲ್ಲಿ ಮತ್ತೊಮ್ಮೆ ಅಮ್ಮ ಆಗದೇ, ಸಿನಿಮಾ ಒಂದರ ಪಾತ್ರಕ್ಕಾಗಿ ಹೀಗೆ ಗೆಟಪ್ ಮಾಡಿಕೊಂಡಿದ್ದಾರೆ. ಅಂದಹಾಗೆ ಚಿತ್ರದ ಹೆಸರು ‘ಉಸಿರೇ ಉಸಿರೇ’.

ಬಿಗ್ ಬಾಸ್ ಹಾಗೂ ಸಿಸಿಎಲ್ ಖ್ಯಾತಿಯ ರಾಜೀವ್ ನಾಯಕನಾಗಿರುವ, ಶ್ರೀಜಿತಾ ಘೋಷ್ ನಾಯಕಿಯಾಗಿರುವ ಚಿತ್ರವಿದು. ಸಿಎಂ ವಿಜಯ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಟಿ ತಾರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣಕ್ಕಾಗಿ ಈ ಗೆಟಪ್ ಮಾಡಿಕೊಂಡಿದ್ದರು.

ನಟಿ ತಾರಾ ಅನುರಾಧ ಕಳೆದ ಮೂರೂವರೆ ದಶಕಗಳಿಂದ ಕನ್ನಡ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಅದರ ಜತೆಗೆ ಕಳೆದ ಒಂದು ದಶಕದಿಂದ ರಾಜಕಾರಣದಲ್ಲೂ ಬಿಜಿಯಾಗಿದ್ದಾರೆ. ಇನ್ನು ಕಳೆದ ಎರಡು ಮೂರು ವರ್ಷಗಳಿಂದ ಕಿರುತೆರೆ, ಅದರಲ್ಲೂ ರಿಯಾಲಿಟಿ ಶೋಗಳಲ್ಲೂ ತಾರಾ ತೊಡಗಿಸಿಕೊಂಡಿದ್ದಾರೆ. ಹೀಗೆ ವಯಸ್ಸು 50 ದಾಟಿದ ನಂತರವೂ ಅವರು ತಮ್ಮದೇ ರೀತಿಯಲ್ಲಿ ಸಿನಿಮಾ, ಶೋ, ಪಾಲಿಟಿಕ್ಸ್ ಅಂತ ಬಿಜಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net