ಭೀಕರ ರಸ್ತೆ ಅಪಘಾತದಲ್ಲಿ ಇಂಟರ್ನೆಟ್​ ಸೆಲೆಬ್ರಿಟಿ, ನಟಿ ಡಾಲಿ ಡಿಕ್ರೂಜ್​ ದುರಂತ ಸಾವು

Dolly D
Published on

ಹೈದರಾಬಾದ್​: ಇಂಟರ್ನೆಟ್​ ಸೆಲೆಬ್ರಿಟಿ ಹಾಗೂ ನಟಿ ಡಾಲಿ ಡಿಕ್ರೂಜ್​ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಡಾಲಿ ಡಿಕ್ರೂಜ್​ ಅವರು ಗಾಯತ್ರಿ ಎಂಬ ಹೆಸರಿನಿಂದಲೂ ಚಿರಪರಿಚಿತರಾಗಿದ್ದರು.

ಗಾಯತ್ರಿ ಮಾತ್ರವಲ್ಲದೆ, ಕಾರು ಚಲಾಯಿಸುತ್ತಿದ್ದ ರಾಥೋಡ್​ ಎಂಬ ವ್ಯಕ್ತಿ ಮತ್ತು ಇನ್ನೊಬ್ಬ ಮಹಿಳೆಯು ಕೂಡ ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖಾ ವರದಿಗಳು ತಿಳಿಸಿವೆ.

ಈ ಭೀಕರ ಅಪಘಾತ ತೆಲುಗು ಸಿನಿ ಮಂದಿಯನ್ನು ಆಘಾತಗೊಳಿಸಿದೆ. ನಟಿ ಸುರೇಖಾ ವಾಣಿ ಮತ್ತು ಆಕೆಯ ಮಗಳು ಸುಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ವೈಯಕ್ತಿಕವಾಗಿ ಗಾಯತ್ರಿಗೆ ತುಂಬಾ ಪರಿಚತರಾಗಿದ್ದ ಅವರು ಆಕೆಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ನಿಜಕ್ಕೂ ಇದು ಅನ್ಯಾಯ. ಈ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟ. ನಿನ್ನೊಂದಿಗೆ ನಾನು ಉತ್ತಮವಾದ ನೆನಪುಗಳನ್ನು ಹೊಂದಿದ್ದೆ. ಹೇಳಲು ಪದಗಳೇ ಇಲ್ಲ. ನಾನು ಸಂಪೂರ್ಣ ಆಘಾತಕ್ಕೆ ಒಳಗಾಗಿದ್ದೇನೆ ಎಂದು ಸುರೇಖಾ ವಾಣಿ ಬರೆದುಕೊಂಡಿದ್ದರೆ, ಅವರ ಮಗಳು ಸುಪ್ರಿತಾ, ಇದೊಂದು ಕಪ್ಪು ದಿನ ಎಂದಿದ್ದಾರೆ.

ಗಾಯತ್ರಿ ಅವರು ಹಲವಾರು ಕಿರುಚಿತ್ರಗಳನ್ನು ಮಾಡುವುದರ ಜೊತೆಗೆ 'ಮೇಡಂ ಸರ್ ಮೇಡಂ ಅಂಥೆ' ವೆಬ್ ಸರಣಿಯನ್ನು ಮಾಡಿದ್ದಾರೆ. 'ಜಲ್ಸಾ ರಾಯುಡು' ಎಂಬ ಯೂಟ್ಯೂಬ್ ಚಾನೆಲ್‌ನೊಂದಿಗೆ ಸಂಯೋಜಿತವಾಗಿರುವ ಗಾಯತ್ರಿ ತಮ್ಮ ಮನಮೋಹಕ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net