

ಹೈದರಾಬಾದ್: ನಟ ನಾಗಚೈತನ್ಯ ಜತೆ ಡಿವೋರ್ಸ್ ಪಡೆದುಕೊಂಡಾಗಿನಿಂದ ಸೌತ್ ಬ್ಯೂಟಿ ಸಮಂತಾ ಭಾರೀ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಯಾಮ್ ಏನೇ ಮಾಡಿದರೂ ಅದು ತಕ್ಷವೇ ಸುದ್ದಿಯಾಗುತ್ತಿದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸ್ಯಾಮ್ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಹಾಟ್ ಡ್ರೆಸ್ ಎಲ್ಲರ ಹುಬ್ಬೇರಿಸುವುದರ ಜತೆಗೆ ಕೆಲವೇ ಕ್ಷಣಗಳಲ್ಲಿ ಫೋಟೋ ವೈರಲ್ ಆಗಿ, ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿತ್ತು. ಇದಕ್ಕೆ ಸಮಂತಾ ಕೂಡ ಸರಿಯಾದ ತಿರುಗೇಟು ನೀಡಿದ್ದರು. ಇದೀಗ ಸಮಂತಾ ವಿದೇಶಿ ವ್ಯಕ್ತಿಯೊಬ್ಬರ ಜತೆ ಆತ್ಮೀಯವಾಗಿ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯಾರದು ಎಂಬ ಕುತೂಹಲ ನೆಟ್ಟಿಗರಲ್ಲಿದೆ.
ಫೋಟೋ ನೋಡಿದವರು ಸಮಂತಾಗೆ ಹೊಸ ಬಾಯ್ಫ್ರೆಂಡ್ ಸಿಕ್ಕಿದರಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಸಲಿ ವಿಚಾರ ಏನೆಂದರೆ, ಫೋಟೋದಲ್ಲಿರುವುದು ಹಾಲಿವುಡ್ನ ಸಾಹಸ ನಿರ್ದೇಶಕ ಯೆನ್ನಿಕ್ ಬೆನ್. ಸಮಂತಾರ ಮುಂದಿನ ಯಶೋಧಾ ಚಿತ್ರದಲ್ಲಿ ಸಮಂತಾ ಸಾಹಸ ದೃಶ್ಯಗಳನ್ನು ಬೆನ್ ನಿರ್ದೇಶನ ಮಾಡಲಿದ್ದಾರೆ.
ಬೆನ್ ಅವರು ಹಾಲಿವುಡ್ ಸಿನಿಮಾಗಳಾದ ಟ್ರಾನ್ಸ್ಪೋರ್ಟರ್ 3, ಇನ್ಸೆಪ್ಸನ್, ಡಂಕಿರ್ಕ್ ಮತ್ತು ಭಾರತೀಯ ಸಿನಿಮಾಗಳಾದ ರಾಯೀಸ್, ಟೈಗರ್ ಜಿಂದಾ ಹೈ, ಅತ್ತಾರಿಂಟಿಕಿ ದಾರೇದಿ, ನೇನೊಕ್ಕಡೈನೆ ಸೇರಿದಂತೆ ಹಲವು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಈ ಮುಂಚೆಯೇ ಸಮಂತಾ ನಟಿಸಿದ್ದ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಯಶೋಧಾ ಚಿತ್ರನ್ನು ಡ್ಯೂ ಹರೀಶ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲು ನಿರ್ದೇಶನದ ಚಿತ್ರ. ಈ ಚಿತ್ರವೂ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್)