

ಪಣಜಿ: ಸಾಲು ಸಾಲು ಸಿನಿಮಾ ಚಿತ್ರೀಕರಣದಿಂದ ದಕ್ಷಿಣ ಭಾರತದ ಬಹುಬೇಡಿಕೆ ನಟಿ ಸಮಂತಾ ಸದ್ಯ ಬಿಡುವು ಪಡೆದುಕೊಂಡಿದ್ದಾರೆ. ಈ ಹಿಂದೆ ತಮ್ಮ ಫ್ರೆಂಡ್ ಜತೆ ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ರಜೆಯ ಮಜಾ ಅನುಭವಿಸಿದ್ದ ಸಮಂತಾ ಇದೀಗ ತಿರುಮಲಕ್ಕೆ ಭೇಟಿ ನೀಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಕೊಂಡಿದ್ದಾರೆ. ಆದರೆ, ಸಮಂತಾ ಹೋದ ಕಡೆಯಲೆಲ್ಲ ಪತಿ ನಾಗಚೈತನ್ಯ ಇಲ್ಲದಿರುವುದು ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬುದು ಮತ್ತೊಮ್ಮೆ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ವಿಚಾರ ಹೆಚ್ಚು ಸದ್ದು ಮಾಡಿತ್ತು. ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ತಾರಾ ದಂಪತಿ ಡಿವೋರ್ಸ್ ಆಗಲಿದ್ದಾರೆಂದು ಸಾಕಷ್ಟು ಚರ್ಚೆಯಾಗುತ್ತಿದ್ದರೂ, ಇದುವರೆಗೂ ಯಾರೋಬ್ಬರು ಈ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ.
ಆದರೆ, ಸಮಂತಾ ನಡೆ ಮಾತ್ರ ಅದಕ್ಕೆ ಪುಷ್ಠಿ ನೀಡುವಂತಿದೆ. ಇತ್ತೀಚೆಗೆ ನಾಗಾರ್ಜುನ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸದೇ ಕೇವಲ ಶುಭಕೋರಿದ್ದರು. ಅಲ್ಲದೆ, ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದರು. ಇದೀಗ ತಾರಾ ದಂಪತಿ ನಡುವೆ ಯಾವುದು ಸರಿಯಿಲ್ಲ ಎನ್ನುವುದಕ್ಕೆ ಮತ್ತೊಂದು ಪುಷ್ಠಿ ದೊರೆತಿದೆ.
ನಿನ್ನೆ ತಿರುಪತಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮಂತಾರನ್ನು ಸುತ್ತುವರಿದ ಸ್ಥಳೀಯ ಪತ್ರಕರ್ತರು, ಡಿವೋರ್ಸ್ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದರು. ಇದರಿಂದ ಕೋಪಗೊಂಡ ಸಮಂತಾ ನಾನು ಬಂದಿರುವುದು ದೇವಸ್ಥಾನಕ್ಕೆ ನಿಮಗೆ ಬುದ್ಧಿ ಇದೆಯಾ? ಎಂದು ಪತ್ರಕರ್ತರ ಮೇಲೆ ಗರಂ ಆದರು. ಪತ್ರಕರ್ತರನ್ನು ಉದ್ದೇಶಿಸಿ ಒಂದು ಮಾತನ್ನು ಸಮಂತಾ ಹೇಳಲಿಲ್ಲ.
ಇನ್ನು ಮದುವೆಯ ಬಳಿಕ ಯಾವುದೇ ಪ್ರವಾಸ ಕೈಗೊಂಡರು ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಹೋಗುತ್ತಿದ್ದರು. ಆದರೆ, ಎಲ್ಲಿಗೆ ಹೋದರು ಸಮಂತಾ ಒಂಟಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬ ಚರ್ಚೆಗೆ ಪುಷ್ಠಿ ನೀಡಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಸಮಂತಾ ಶಾಕುಂತಲಂ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್)