ನನ್ನ ರಾಜಕೀಯದ ನಿರ್ಧಾರಕ್ಕೆ ಈಗ ಪಶ್ಚತಾಪ ಪಡುತ್ತಿದ್ದೇನೆ ಅದಕ್ಕೆ ಕಾರಣ ತಾಪ್ಸಿ ಪನ್ನು ಎಂದ ಮೆಗಾಸ್ಟಾರ್​!

Chiru
Published on

ಹೈದರಾಬಾದ್​: ನಟಿ ತಾಪ್ಸಿ ಪನ್ನು ತಮ್ಮ ಹೊಸ ಸಿನಿಮಾ ಮಿಷನ್ ಇಂಪಾಸಿಬಲ್ ಮೂಲಕ ತೆರೆ ಮೇಲೆ ವಿಜೃಂಭಿಸಲು ರೆಡಿಯಾಗಿದ್ದಾರೆ. ಈ ಶುಕ್ರವಾರ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಿನ್ನೆಯಷ್ಟೇ ಚಿತ್ರದ ಪ್ರೀ ರಿಲೀಸ್​ ಈವೆಂಟ್​ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಮೆಗಾಸ್ಟಾರ್​ ಚಿರಂಜೀವಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ತಾಪ್ಸಿ ಉದ್ದೇಶಿಸಿ ಮಾತನಾಡಿದ ಚಿರಂಜೀವಿ, ತಾಪ್ಸಿ ಜತೆ ನಟಿಸುವ ಅವಕಾಶ ಕೈತಪ್ಪಿ ಹೋಯಿತು. ಹೀಗಾಗಿ ರಾಜಕೀಯಕ್ಕೆ ಸೇರಿದ ನನ್ನ ನಿರ್ಧಾರವನ್ನು ನಾನು ವಿಷಾದಿಸುತ್ತೇನೆ. ರಾಜಕೀಯಕ್ಕೆ ಹೋಗದೇ ಇದ್ದಿದ್ದರೆ ನಟಿಸುವ ಅವಕಾಶ ಸಿಗುತ್ತಿತ್ತೇನೋ? ಮುಂದಿನ ದಿನಗಳಲ್ಲದಾರೂ ಅವರೊಂದಿಗೆ ತೆರೆ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದರು. ಈ ವೇಳೆ ವೇದಿಕೆ ಮೇಲೆ ತಾಪ್ಸಿ ತುಸು ನಕ್ಕರು.

ತಾಪ್ಸಿ ಪನ್ನು ಮತ್ತು ತನ್ನನ್ನು ಪ್ರಮುಖ ಪಾತ್ರಗಳಲ್ಲಿ ಚಿತ್ರಿಸುವಂತೆ ನಿರ್ದೇಶಕ ನಿರಂಜನ್ ರೆಡ್ಡಿಗೆ ಇದೇ ಸಂದರ್ಭದಲ್ಲಿ ಮೆಗಾಸ್ಟಾರ್​ ವಿನಂತಿಸಿದರು. ಮಿಷನ್ ಇಂಪಾಸಿಬಲ್ ಚಲನಚಿತ್ರವನ್ನು ವೀಕ್ಷಿಸಿದ್ದೇನೆ ತುಂಬಾ ಅದ್ಭುತವಾಗಿದೆ ಎಂದು ಹೊಗಳಿದರು.

ಈ ವೇಳೆ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ ಮೂವರು ಹುಡುಗರನ್ನು ಇದೇ ಸಂದರ್ಭದಲ್ಲಿ ಹೊಗಳಿದರು. ಅಷ್ಟೇ ಅಲ್ಲ ಆರ್‌ಆರ್‌ಆರ್ ಸಿನಿಮಾವನ್ನು ಶ್ಲಾಘಿಸಿದ ಚಿರು, ಪ್ರೇಕ್ಷಕರ ಜೇಬಿನಿಂದ ಕೇವಲ 100-200 ರೂಪಾಯಿ ನೀಡಿ ಚಿತ್ರರಂಗವನ್ನು ಉಳಿಸಬಹುದು. ಮಿಷನ್ ಇಂಪಾಸಿಬಲ್ ನಂತಹ ಸಿನಿಮಾಗಳನ್ನು ಪ್ರೇಕ್ಷಕರು ಕೂಡ ನೋಡಬೇಕು, ಅದು ಕಡಿಮೆ ಬಜೆಟ್ ಆಗಿರಬಹುದು ಆದರೆ ಕಂಟೆಂಟ್ ಪ್ರಕಾರ ಅದು ದೊಡ್ಡ ಸಿನಿಮಾ ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದರು.

ಸಿನಿಮಾ ವಿಚಾರಕ್ಕೆ ಬಂದರೆ, ಚಿರಂಜೀವಿ ಅವರು ಆಚಾರ್ಯ, ಭೋಲಾ ಶಂಕರ್ ಮತ್ತು ಗಾಡ್‌ಫಾದರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net