ಮೊದಲ ಬಾರಿಗೆ ಅಶ್ಲೀಲ ದೃಶ್ಯದಲ್ಲಿ ನಟನೆ: ನಟಿ ಇಶಾ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಬಾಬಿ ಡಿಯೋಲ್​

Boby deol
Published on

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್​ ನಟ ಬಾಬಿ ಡಿಯೋಲ್​ ಅಭಿನಯದ ಆಶ್ರಮ್​ - 3 ವೆಬ್​ ಸರಣಿಯು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೊಂದು ಕ್ರೈಂ ಥ್ರಿಲ್ಲರ್​ ಸಿನಿಮಾ. ಪ್ರಕಾಶ್​ ಜಾ ನಿರ್ದೇಶನ ಮಾಡಿದ್ದು, ಇಶಾ ಗುಪ್ತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಆಶ್ರಮ್​-3 ವೆಬ್​ ಸರಣಿಯು ಪ್ರಸ್ತುತ ಎಂಎಕ್ಷ್​ ಪ್ಲೇಯರ್​ನಲ್ಲಿ ಸ್ಟ್ರೀಮಿಂಗ್​ ಆಗುತ್ತಿದೆ. ಇದರ ನಡುವೆ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ಬಾಬಿ ಡಿಯೋಲ್​, ಕೆಲವೊಂದು ಆಸಕ್ತಿದಾಯಕ ವಿಚಾರಗಳನ್ನು ತೆರೆದಿಟ್ಟರು.

ಪ್ರಮುಖವಾಗಿ ಸಿನಿಮಾದಲ್ಲಿರುವ ಇಂಟಿಮೇಟ್​ ದೃಶ್ಯಗಳ ಬಗ್ಗೆ ಬಾಬಿ ಡಿಯೋಲ್​ ಮಾತನಾಡಿದರು. ಮೊದಲ ಬಾರಿಗೆ ಆಕ್ಷೇಪಾರ್ಹ ದೃಶ್ಯದಲ್ಲಿ ನಟಿಸಿದ್ದು ನನಗೆ ತುಂಬಾ ಭಯವಾಯಿತು. ಇದೇ ಮೊದಲ ಬಾರಿಗೆ ತುಂಬಾ ಸಲುಗೆಯಿಂದ ನಟಿಸಿದೆ. ಆದರೆ, ಇಶಾ ಗುಪ್ತಾ ತುಂಬಾ ವೃತ್ತಿಪರಳು. ಅವರ ಪಾತ್ರದಲ್ಲಿ ತಲ್ಲೀನರಾಗಿದ್ದರಿಂದ ಅವರ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ಸ್ವಲ್ಪ ಸುಲಭವಾಯಿತು ಎಂದು ಹೇಳಿದ್ದಾರೆ.

ಇಶಾ ಸಹಕಾರದಿಂದಾಗಿಯೇ ಆ ದೃಶ್ಯ ತೆರೆಯ ಮೇಲೆ ಚೆನ್ನಾಗಿ ಮೂಡಿಬಂದಿದೆ. ನೆಗೆಟಿವ್ ಪಾತ್ರದಲ್ಲಿ ಜನ ಒಪ್ಪಿಕೊಂಡಿದ್ದಕ್ಕೆ ಖುಷಿಯಾಯಿತು. ನಾನು ಯಾವಾಗಲೂ ವಿಭಿನ್ನ ಮತ್ತು ಸವಾಲಿನ ಪಾತ್ರಗಳನ್ನು ಮಾಡಬಲ್ಲೆ ಎಂದು ನಂಬಿದ್ದೇನೆ ಎನ್ನುವ ಮೂಲಕ ಬಾಬಿ ಡಿಯೋಲ್​ ಮಾತು ಮುಗಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net