BBK8: ಎಂಟು ಸ್ಪರ್ಧಿಗಳಿಗೆ ಗೊತ್ತಾಗಿದೆ ಬಿಗ್​ಬಾಸ್​ ಸೀಸನ್​ 8ರ ವಿನ್ನರ್​​ ನೇಮ್​..!​

BBK 8
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್​ ಅಂತಿಮ ಹಂತಕ್ಕೆ ಬಂದಿದೆ. ಸೆಕೆಂಡ್​ ಇನ್ನಿಂಗ್ಸ್​ ಆರಂಭವಾದಾಗಿನಿಂದ ಅರವಿಂದ್​ ಕೆ.ಪಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್​ ಕಾಯ್ದುಕೊಂಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಕೇವಲ ಸ್ಪರ್ಧಿಯಲ್ಲದೆ, ಕರ್ನಾಟಕ ವಲಯದ ಬೈಕ್​ ರೇಸರ್​ ಆಗಿ ಖ್ಯಾತಿಯನ್ನು ಪಡೆದಿದ್ದಾರೆ. ಇನ್ನು ಸೀಸನ್​ 8 ಕನ್ನಡಿಗರ ಮನೆ ಮಾತಾಗಲು ಮುಖ್ಯ ಕಾರಣ ಕಿಚ್ಚ ಸುದೀಪ್​ ಅವರ ಸ್ಟೈಲೀಶ್​ ನಿರೂಪಣೆ.

ಸದ್ಯ ಟ್ರೆಂಡ್​ ಪ್ರಕಾರ ಅರವಿಂದ್​ ವೀಕ್ಷಕರ ಫೇವರಿಟ್​ ಸ್ಪರ್ಧಿಯಾಗಿದ್ದಾರೆ. ಶೋ ಆರಂಭವಾದಾಗಿನಿಂದ ಈ ಬಾರಿ ಟ್ರೋಫಿ ಗೆಲ್ಲುವುದು ಯಾರು ಎಂಬ ಜನಗಳ ಊಹೆ ಬದಲಾಗದೇ ಇರುವುದು ಅಚ್ಚರಿಯ ಸಂಗತಿ. ಮೊದಲಿನಿಂದಲೇ ಜನಗಳ ಬಾಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರೆಂದರೆ ಅದು ಅರವಿಂದ್​. ವೀಕ್ಷಕರು ಅಥವಾ ನೆಟ್ಟಿಗರು ಮಾತ್ರವಲ್ಲ ಮನೆಯ ಒಳಗಡೆ ಇರುವ ಸ್ಪರ್ಧಿಗಳ ಬಾಯಲ್ಲೂ ಅರವಿಂದ್​ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ.

ಬಿಗ್​ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳು ಅರವಿಂದ್​ ಜತೆ ಜಗಳ ಮಾಡಿಕೊಳ್ಳಲು ಸಹ ಹೆದರುತ್ತಿದ್ದಾರೆ. ಅರವಿಂದ್​ರನ್ನು ನಾಮಿನೇಟ್​ ಮಾಡುವ ಸ್ಪರ್ಧಿಗಳು ಅರವಿಂದ್​ ಅಭಿಮಾನಿಗಳ ಕಣ್ಣಿಗೆ ಗುರಿಯಾಗಿ ಟ್ರೋಲ್​ ಆಗುತ್ತಿದ್ದಾರೆ. ಇನ್ನು ನಿನ್ನೆ ನಡೆದ ಮತ್ತೊಂದು ಸುತ್ತಿನ ನಾಮಿನೇಶನ್​ ಪ್ರಕ್ರಿಯೆಯಲ್ಲಿ ಸೂಕ್ತ ಕಾರಣ ನೀಡಿ ಒಬ್ಬೊಬ್ಬ ಎದುರಾಳಿ ಸ್ಪರ್ಧಿಯನ್ನು ನಾಮಿನೇಟ್​ ಮಾಡುವಂತೆ ಕೇಳಲಾಯಿತು. ಈ ವೇಳೆ ಯಾರೊಬ್ಬರು ಸಹ ಅರವಿಂದ್​ ಹೆಸರನ್ನೇ ತೆಗೆದುಕೊಳ್ಳಲೇ ಇಲ್ಲ.

ನಾಮಿನೇಶನ್​ ಮಾಡದಿರುವುದು ಅರವಿಂದ್ ಕೆ.ಪಿ ಕನ್ನಡ ಬಿಗ್ ಬಾಸ್ 8ರ ವಿಜೇತರು ಎಂದು ಸ್ಪರ್ಧಿಗಳೇ ತಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವುದು ಸಾಕಷ್ಟು ಸ್ಪಷ್ಟವಾಗಿದೆ. ಈ ವಾರ ಎಲಿಮಿನೇಷನ್​ಗಾಗಿ ಒಬ್ಬ ಸ್ಪರ್ಧಿಯು ಕೂಡ ಅರವಿಂದ್ ಹೆಸರನ್ನು ನಾಮನಿರ್ದೇಶನ ಮಾಡಲಿಲ್ಲ.

ಬಿಗ್​ಬಾಸ್ ನಿರೂಪಕ ಕಿಚ್ಚ ಸುದೀಪ್ ಮತ್ತು ಶೋ ನಡೆಸುವ ಕಲರ್ಸ್ ಕನ್ನಡ ವಾಹಿನಿ ಕೂಡ ಸೀಸನ್ 8ರ ಅಂತಿಮ ವಿಜೇತ ಅರವಿಂದ್ ಕೆ.ಪಿ ಎಂಬ ಸುಳಿವು ನೀಡುತ್ತಿರುವಂತೆ ಕಾಣುತ್ತದೆ. ಇದೇ ರೀತಿಯಲ್ಲಿ ಆಟ ಮುಂದುವರಿಸಿದರೆ ಅರವಿಂದ್​ ಬಿಗ್​ಬಾಸ್​ ಟ್ರೋಫಿ ಮತ್ತು 50 ಲಕ್ಷ ರೂ. ನಗದು ಬಹುಮಾನದೊಂದಿಗೆ ಮನೆಗೆ ಹೋಗುವುದನ್ನು ನಿರೀಕ್ಷಿಸಬಹುದಾಗಿದೆ. ಆದರೆ, ಬಿಗ್ ಬಾಸ್ ಆಟದಲ್ಲಿ ಕೊನೆಯ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ. ಏಕೆಂದರೆ ಎಲ್ಲವು ವೀಕ್ಷಕರು ಅಥವಾ ಮತದಾರರ ಕೈಯಲ್ಲಿರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net