ಬಿಗ್​ಬಾಸ್​ ಹೋದರೇನಂತೆ ಅರವಿಯಾ ಜೋಡಿಗೆ ಒಲಿದು ಬಂತು ಮತ್ತೊಂದು ಬಂಪರ್​ ಆಫರ್​..!

Aravind Divya
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ಕ್ಕೆ ವರ್ಣರಂಜಿತ ತೆರೆಬಿದ್ದಿದೆ. ಲ್ಯಾಗ್ ಮಂಜು ಖ್ಯಾತಿಯ ಮಂಜು ಪಾವಗಡ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಅರವಿಂದರ್​ ರನ್ನರ್​ ಅಪ್​ ಆದರೆ, ದಿವ್ಯಾ ಉರುಡುಗ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಅರವಿಯಾ (ಅರವಿಂದ್​ ಮತ್ತು ದಿವ್ಯಾ ಉರುಡುಗ) ಎಂದೇ ಬಿಗ್​ಬಾಸ್​ ಮನೆಯಲ್ಲಿ ಖ್ಯಾತಿಯಾಗಿರು ಜೋಡಿಯು ರನ್ನರ್​ಅಪ್​ ಮತ್ತು ಸೆಕೆಂಡ್​ ರನ್ನರ್​ ಅಪ್​ ಸ್ಥಾನ ಪಡೆದಿದ್ದಕ್ಕೆ ಅಭಿಮಾನಿಗಳಿಗೆ ಬೇಸರವಾಗಿದೆ. ಆದರೂ, ಇಬ್ಬರ ಪ್ರದರ್ಶನ ಬಗ್ಗೆ ಅಭಿಮಾನಿಗಳಿಗೆ ಮೆಚ್ಚುಗೆ ಇದೆ.

ಅರವಿಯಾ ಜೋಡಿಗೆ ತುಂಬಾ ಖ್ಯಾತಿ ಇರುವುದರಿಂದ ಅದರ ಉಪಯೋಗ ಪಡೆದುಕೊಳ್ಳಲು ಕಲರ್ಸ್​ ಕನ್ನಡ ಮುಂದಾಗಿದೆ. ಹೌದು, ಇಬ್ಬರ ಕೆಮಿಸ್ಟ್ರಿಯಿಂದ ಒಳ್ಳೆಯ ಟಿಆರ್​ಪಿ ಪಡೆಯಬಹುದು ಎಂಬುದು ಕಲರ್ಸ್​ ಕನ್ನಡದ ತಂತ್ರವಾಗಿದೆ. ಹೀಗಾಗಿ ಅವರಿಬ್ಬರಿಗೆ ಕಲರ್ಸ್​ ಕನ್ನಡ ಬಂಪರ್​ ಆಫರ್​ ಒಂದನ್ನು ನೀಡಿದೆ.

ಇಬ್ಬರು ಮತ್ತೊಂದು ಶೋನಲ್ಲಿ ಒಟ್ಟಿಗೆ ಕರೆತರುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಆ ಕಾರ್ಯಕ್ರಮ ಬೇರೆ ಯಾವುದು ಅಲ್ಲ. ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿರುವ ಜನಮನ್ನಣೆ ಗಳಿಸಿರುವ ರಾಜಾ ರಾಣಿ ಶೋ. ಈ ಕಾರ್ಯಕ್ರಮಕ್ಕೆ ವೈಲ್ಡ್​ ಕಾರ್ಡ್​ ಮೂಲಕ ಅರವಿಯಾ ಜೋಡಿಯನ್ನು ಕರೆತರಲು ಕಲರ್ಸ್​ ಕನ್ನಡ ಪ್ಲಾನ್​ ಮಾಡಿದೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net