ಕಿಚ್ಚ ಸುದೀಪ್ ಆಪ್ತ, ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್‌ ಮಂಜು ಆಸ್ಪತ್ರೆಗೆ ದಾಖಲು

Jack Manju
Published on

ಬೆಂಗಳೂರು: ನಟ ಕಿಚ್ಚ ಸುದೀಪ್ ಆತ್ಮೀಯ ಹಾಗೂ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್‌ ಮಂಜು ಬನ್ನೇರುಘಟ್ಟ ಬಳಿಯಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎರಡು ದಿನದ ಹಿಂದೆ ಜಾಕ್​ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮಕ್ಕೆ ಹೋಗಿದ್ದಾಗ ಎಡವಿ ಬಿದ್ದು ಕಾಲು ಮುರಿದುಕೊಂಡಿದ್ದರು. ಕಳೆದ 20 ದಿನದ ಹಿಂದೆ ಈ ಘಟನೆ ನಡೆದಿತ್ತು. ಕೊನೆಗೆ‌ ಕಾಲಿಗೆ ಚಿಕಿತ್ಸೆಯನ್ನು ಪಡೆದಿದ್ದರು. ಆದರೆ, ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಊತ ಬಂದಿತ್ತು. ಹೀಗಾಗಿ ಎರಡು‌ ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಜಾಕ್​ ಮಂಜು ಅವರು ಆಪರೇಷನ್ ಮಾಡಿಸಿಕೊಂಡಿದ್ದು, ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಶೀಘ್ರ ಚೇತರಿಕೆಗೆ ಅಭಿಮಾನಿಗಳು ಮತ್ತು ಬಂಧು-ಬಳಗದವರು ಹಾರೈಸುತ್ತಿದ್ದಾರೆ.

ಜಾಕ್​ ಮಂಜು ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ ವಿಕ್ರಾಂತ್​ ರೋಣ ಜುಲೈ 28ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಅಭಿನಯ ಚಕ್ರವರ್ತಿ ಕಿಚ್ಚು ಸುದೀಪ್​, ನಿರೂಪ್​ ಭಂಡಾರಿ, ನೀತಾ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ರಂಗಿತರಂಗ ಖ್ಯಾತಿಯ ಅನೂಪ್​ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಬಿಗ್​ ಬಜೆಟ್​ ಚಿತ್ರವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ರಾರಾ ರಕ್ಕಮ್ಮ ಹಾಡು ಎಲ್ಲರ ಹುಚ್ಚಿಡಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net