

ಬೆಂಗಳೂರು: ಕರೊನಾದಿಂದಾಗಿ ಬಿಗ್ಬಾಸ್ ಸೀಸನ್ 8ನೇ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡಿದೆ. ಸ್ಪರ್ಧಿಗಳೆಲ್ಲರು ಇಂದು ಮನೆಯಿಂದ ಹೊರಗೆ ಬರಲಿದ್ದಾರೆ. ಯಾರು ಗೆಲ್ಲಲಿದ್ದಾರೆ? ಯಾರಿಗೆ ಬಹುಮಾನ ದೊರೆಯಲಿದೆ? ಎಂಬ ಮಾಹಿತಿ ಈವರೆಗೂ ತಿಳಿದುಬಂದಿಲ್ಲ.
ಈ ನಡುವೆ ಮನೆಯಿಂದ ಅರ್ಧದಲ್ಲೇ ಎಲಿಮಿನೇಟ್ ಆಗಿ ಅಚ್ಚರಿಗೆ ಕಾರಣರಾಗಿರುವ ರಾಜೀವ್, ತಮ್ಮ ಎಲಿಮಿನೇಶನ್ ಬಗ್ಗೆ ಬೆರಗಾಗುವಂತಹ ಹೇಳಿಕೆ ನೀಡಿ ಇದೀಗ ಸುದ್ದಿಯಾಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿರುವ ಟಾಪ್ ಫೈನಲಿಸ್ಟ್ ಸ್ಪರ್ಧಿಗಳಲ್ಲಿ ರಾಜೀವ್ ಸಹ ಒಬ್ಬರು ಎಂದು ಹೇಳಲಾಗಿತ್ತು. ಆದರೆ, ಅವರ ಅರ್ಧದಲ್ಲೇ ಎಲಿಮಿನೇಟ್ ಆಗಿದ್ದು ಬಹುತೇಕರಿಗೆ ಅಚ್ಚರಿಯಾಗಿದೆ.
ಅಲ್ಲದೆ, ಈ ವಿಚಾರವಾಗಿ ನೆಟ್ಟಿಗರು ಕಲರ್ಸ್ ಕನ್ನಡವನ್ನು ಟ್ರೋಲ್ ಸಹ ಮಾಡಿದ್ದರು. ರಾಜೀವ್ಗೆ ಮರುಪ್ರವೇಶ ನೀಡುವಂತೆ ಒತ್ತಾಯ ಸಹ ಮಾಡಿದ್ದರು. ಅಷ್ಟರಮಟ್ಟಿಗೆ ರಾಜೀವ್ ಖ್ಯಾತಿಯನ್ನು ಪಡೆದುಕೊಂಡಿದ್ದರು.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಾಜೀವ್ ತಮ್ಮ ಎಲಿಮಿನೇಟ್ ಬಗ್ಗೆ ಮಾತನಾಡಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಗ್ಬಾಸ್ ಟ್ರೋಫಿ ಗೆಲ್ಲದೇ ಇದ್ದಿದ್ದರೂ ನನಗೆ ಬೇಸರ ಇರಲಿಲ್ಲ. ಅಂತಿಮ ಸ್ಪರ್ಧಿಗಲ್ಲಿ ನಾನು ಇರುತ್ತೇನೆ ಎಂಬ ಭರವಸೆ ಇತ್ತು. ಆದರೆ, ಅದು ಈಡೇರಲಿಲ್ಲ ಎಂದಿದ್ದಾರೆ.
ತಮ್ಮ ಬಿಗ್ಬಾಸ್ ಆಟವನ್ನು ಸಚಿನ್ಗೆ ಹೋಲಿಕೆ ಮಾಡಿರುವ ರಾಜೀವ್, ಸಚಿನ್ 100 ಹೊಡೆದರೆ ಟೀಮ್ ಇಂಡಿಯಾ ಆ ಪಂದ್ಯವನ್ನ ಸೋಲುತ್ತದೆ ಎಂಬ ನಂಬಿಕೆ ಇತ್ತು. ನಾನು 100 ಅಂಕ ಗಳಿಸುವ ವ್ಯಕ್ತಿಯಲ್ಲ. ಆದರೆ, 85 ಅಂಕ ಪಡೆಯುವ ವಿದ್ಯಾರ್ಥಿಯಂತೂ ಹೌದು. ಕೊನೆಗೆ 13 ಅಥವಾ 12 ವಾರಗಳಾದರೂ ಮನೆಯಲ್ಲಿರುತ್ತೇನೆ ಅಂದುಕೊಂಡಿದ್ದೆ. ಆದರೆ, ಅದು ಆಗಲಿಲ್ಲ ಎಂದು ಬೇಸರು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)