

ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ಕರಿನೆರಳು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಮೇಲೆ ಬಿದ್ದಿದ್ದು, ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಂಡಿದೆ. ಇದರಿಂದಾಗಿ ಬಿಗ್ಬಾಸ್ ಅಭಿಮಾನಿಗಳಿಗೆ ಭಾರಿ ನಿರಾಶೆ ಆಗಿದೆ.
ಕಾರ್ಯಕ್ರಮ ನಿಂತ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸ್ಪರ್ಧಿಗಳ ಕುರಿತ ಚರ್ಚೆ ಶುರುವಾಗಿದೆ. ಶೋ ನ ಆರಂಭದಿಂದ ಸಂಚಲನ ಮೂಡಿಸಿರುವ ಮಜಾಭಾರತದ ಮಂಜ ಮತ್ತು ದಿವ್ಯಾ ಸುರೇಶ್ ಸಂಬಂಧದ ಬಗ್ಗೆಯು ನೆಟ್ಟಿಗರು ಸ್ಫೋಟಕ ವಿಚಾರವೊಂದನ್ನು ಬಯಲಿಗೆ ಎಳೆದಿದ್ದಾರೆ.
ಇಬ್ಬರ ನಡುವೆ ಲವ್ ಇದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಇದು ಸ್ವತಃ ವೀಕ್ಷಕರಿಗೂ ಅಚ್ಚರಿಯಾಗಿತ್ತು. ಶೋ ನ ಮಧ್ಯೆ ಜೋಡಿ ಟಾಸ್ಕ್ ಆದಾಗಿನಿಂದ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಸಹ ತುಂಬಾ ಆಪ್ತರಾದರು. ಇವರಿಬ್ಬರ ಜೋಡಿ ತುಂಬಾ ಜನಮನ್ನಣೆಯನ್ನೂ ಗಳಿಸಿದೆ. ಇದೀಗ ಅರವಿಂದ್-ದಿವ್ಯಾ ಉರುಡುಗ ಜೋಡಿ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿವೆ. ಆದರೆ, ಮಂಜು ಮತ್ತು ದಿವ್ಯಾ ಸುರೇಶ್ ಜೋಡಿಯನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಇನ್ನೊಬ್ಬ ಮಹಿಳಾ ಸ್ಪರ್ಧಿಯೊಂದಿಗೆ ಲ್ಯಾಗ್ ಮಂಜು ಆಪ್ತವಾಗಿದ್ದರೆ, ಆತನ ಬಗ್ಗೆ ಅಸುರಕ್ಷಿತ ಭಾವನೆ ಹೊಂದುತ್ತಿದ್ದರು ಎಂದು ದಿವ್ಯಾ ಸುರೇಶ್ರನ್ನು ಕಾರ್ಯಕ್ರಮದ ಮೊದಲ ದಿನದಿಂದಲೂ ಟ್ರೋಲ್ ಮಾಡುತ್ತಿದ್ದಾರೆ. ದಿವ್ಯಾ ಉರುಡುಗ ಮತ್ತು ಅರವಿಂದ ಜೋಡಿಯ ಬಗ್ಗೆ ದಿವ್ಯಾ ಸುರೇಶ್ ಅಸೂಯೆ ಪಟ್ಟಿದ್ದಾರೆಂದು ವೀಕ್ಷಕರು ಟೀಕಿಸಿದ್ದಾರೆ.
ವೀಕ್ಷಕರ ವಿಶ್ಲೇಷಣೆ ಪ್ರಕಾರ ಮಂಜು ಆಟದ ಮೇಲೆ ಗಮನಹರಿಸುತ್ತಿರಲಿಲ್ಲ. ದಿವ್ಯಾ ಸುರೇಶ್ ಮನೆಯಿಂದ ಹೊರ ಹೋಗಿದ್ದರೆ ಮಂಜು ತಮ್ಮ ಅಸಲಿ ಆಟ ಆಡುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ. ನೆಟ್ಟಿಗರು ಪ್ರಕಾರ ಬಿಗ್ ಮನೆಯಲ್ಲಿ ಮಂಜು ಮತ್ತು ದಿವ್ಯಾ ಅವರ ಪ್ರೀತಿಯ ವರ್ತನೆ ಮೇಲ್ನೋಟಕ್ಕೆ ಮಾತ್ರ. ಅವರಿಬ್ಬರ ಸಂಬಂಧ ನಕಲಿ ಎಂದಿದ್ದಾರೆ.
ದಿವ್ಯಾ ಸುರೇಶ್ ಜತೆ ಪ್ರೀತಿ ಶುರುವಾದಾಗಿನಿಂದ ಮಂಜು ತನ್ನ ಕಾಮಿಡಿ ಟ್ರ್ಯಾಕ್ ಅನ್ನೇ ಮರೆತಿದ್ದಾರೆಂದು ನೆಟ್ಟಿಗರು ಹೇಳಿದ್ದಾರೆ. ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಬಿಗ್ಬಾಸ್ ಮನೆಯಲ್ಲಿ ಹೆಚ್ಚ ದಿನ ಉಳಿಯುವ ತಂತ್ರವಾಗಿ ಇಬ್ಬರು ಪ್ರೀತಿಯ ನಾಟಕ ಆಡುತ್ತಿದ್ದರು ಎಂದು ನೆಟ್ಟಿಗರು ಇಬ್ಬರನ್ನು ಟ್ರೋಲ್ ಮಾಡುತ್ತಿದ್ದಾರೆ. (ಏಜೆನ್ಸೀಸ್)