ಬಿಗ್​ಬಾಸ್​ ಸೀಸನ್​ 8: ಅತಿ ಕಿರಿಕಿರಿಯುಂಟುಮಾಡುವ ಸ್ಪರ್ಧಿ ಯಾರು ಗೊತ್ತಾ? ಇಲ್ಲಿದೆ ಉತ್ತರ!

BBK 8
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಬಹಳ ಕುತೂಹಲವನ್ನು ತೆರೆದಿಟ್ಟಿದೆ. ಶೋ ಮುಗಿಯಲು ಇನ್ನು ಎರಡೇ ವಾರಗಳು ಬಾಕಿ ಇವೆ. ಯಾರು ಗೆಲ್ಲುತ್ತಾರೆಂಬ ಕುತೂಹಲ ಹೆಚ್ಚಾಗಿದೆ. ಎರಡನೇ ಇನ್ನಿಂಗ್ಸ್​ ಆರಂಭವಾದ ಬಳಿಕ ನಿಧಿ ಸುಬ್ಬಯ್ಯ ಎಲಿಮಿನೇಟ್​ ಆಗಿದ್ದಾರೆ.

ಇನ್ನು ಬಿಗ್​ಬಾಸ್​ ವೀಕ್ಷಕರ ಪ್ರಕಾರ ಚಕ್ರವರ್ತಿ ಚಂದ್ರಚೂಡ್​ ತುಂಬಾ ಕಿರಿಕಿರಿ ಉಂಟುಮಾಡುವ ಸ್ಪರ್ಧಿಯಂತೆ. ಚಂದ್ರಚೂಡ್​ ವೈಲ್ಡ್​​​ ಕಾರ್ಡ್​ ಮೂಲಕ ಮನೆ ಪ್ರವೇಶಿಸಿದರು. ಅಂದಿನಿಂದ ಅವರು ಮನೆಯಲ್ಲಿನ ಸ್ಪರ್ಧಿಗಳ ಬಗ್ಗೆ ಸೂಕ್ತವಲ್ಲದ ಪದಗಳನ್ನೇ ಬಳಸುತ್ತಿದ್ದಾರೆ.

ತಾಳ್ಮೆ ಕಳೆದುಕೊಳ್ಳುವುದರಲ್ಲಿ ಚಂದ್ರಚೂಡ್​ ನಂಬರ್​ ಒನ್​ ಅಂತೆ. ಸಣ್ಣ ವಿಚಾರಗಳಿಗೂ ಅವರು ಕೋಪಗೊಳ್ಳುತ್ತಾರೆಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ವಿರುದ್ಧ ವಿವಾದ ಸೃಷ್ಟಿಕೊಂಡಿದ್ದ ಚಂದ್ರಚೂಡ್​ ಎರಡನೇ ಇನ್ನಿಂಗ್ಸ್​ನಲ್ಲಿ ಪ್ರಿಯಾಂಕ ತಿಮ್ಮೇಶ್​ ಬಳಿ ಕಿತ್ತಾಡಿಕೊಳ್ಳುತ್ತಿದ್ದಾರೆ.

ಬಿಗ್​ಬಾಸ್​ನಲ್ಲಿ ಈವರೆಗೂ ಚಂದ್ರಚೂಡ್​ ಸ್ಪರ್ಧಿಗಳ ಜತೆ ಚರ್ಚೆಗೆ ಧುಮುಕ್ಕಿದ್ದೇ ಹೆಚ್ಚು. ಅಲ್ಲದೆ, ಸಣ್ಣ ವಿಚಾರಕ್ಕೂ ಕೂಗಾಡುತ್ತಾರೆ. ಇದನೆಲ್ಲವನ್ನು ಪರಿಗಣಿಸಿರುವ ಬಿಗ್​ಬಾಸ್​ ವೀಕ್ಷಕರು ಬಿಬಿಕೆ-8ರ ಅತಿ ಕಿರಿಕಿರಿಯುಂಟು ಮಾಡುವ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಎಂದು ಹೆಸರಿಸಿದ್ದಾರೆ. ನಿಮಗೆ ಏನನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net