ವಿಶೇಷ ದಾಖಲೆ ಬರೆದ ದಿವ್ಯಾ ಉರುಡುಗ: ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲಿ ಇದೇ ಮೊದಲು!

Divya
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​​ 8ರ ಮಹಿಳಾ ಸ್ಪರ್ಧಿ ದಿವ್ಯಾ ಉರುಡುಗ ಬಿಗ್​ಬಾಸ್​ ಮನೆಯಿಂದ ಹೊರಗಡೆ ತನ್ನ ಖ್ಯಾತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೀಸನ್​ನಿಂದ ಹೊರಬಿದ್ದರು ಅವರು ಪಡೆದಿರುವ ಖ್ಯಾತಿಗೆ ಅವಕಾಶಗಳು ಸಿಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.


ಬಿಗ್​ಬಾಸ್​ ಮನೆಯೊಳಗೆ ಸಹ ಸ್ಪರ್ಧಿ ಕೆ.ಪಿ. ಅರವಿಂದ್​ ಜತೆ ಜೋಡಿ ಟಾಸ್ಕ್​ ನಡೆದಾಗಿನಿಂದ ದಿವ್ಯಾ ಸಾಕಷ್ಟು ಬಾರಿ ಟ್ರೋಲ್​ ಆಗಿದ್ದಾರೆ. ಆದರೆ, ಇದೀಗ ದಿವ್ಯಾ, ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಟ್ವಿಟರ್​ ಟ್ರೆಂಡ್​ ಆದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಸರು ಪಡೆದುಕೊಂಡಿದ್ದಾರೆ.

21 ಸಾವಿರಕ್ಕೂ ಹೆಚ್ಚು ಟ್ವೀಟ್​ಗಳು ದಿವ್ಯಾ ಹೆಸರಿನಲ್ಲಿ ಹರಿದಾಡಿವೆ. ಇದು ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲೇ ಇದೇ ಮೊದಲು. ದಿವ್ಯಾ ನೀವು ನಿಜಕ್ಕೂ ಇದಕ್ಕೆ ಅರ್ಹರು. ಬಿಗ್​ಬಾಸ್​ ಮನೆಯೊಳಗೆ ನೀವು ತುಂಬಾ ಚೆನ್ನಾಗಿ ಕಾಣುವುದರ ಜತೆಯಲ್ಲೇ ಸೊಗಸಾಗಿ ಆಡುತ್ತಿದ್ದೀರಾ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ದಿವ್ಯಾರಿಗೆ ಹೆಚ್ಚು ಆದ್ಯತೆ ನೀಡುವಂತೆ ಕಲರ್ಸ್​ ಕನ್ನಡವನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಅಂದಹಾಗೆ ದಿವ್ಯಾ ಅವರಿಗೆ ಇಷ್ಟೊಂದು ಖ್ಯಾತಿ ಬರಲು ಅರವಿಂದ್​ ಕೆ.ಪಿ. ಪ್ರಮುಖರು ಎಂದು ಹೇಳಲಾಗುತ್ತಿದೆ. ಇಬ್ಬರ ಕೆಮಿಸ್ಟ್ರಿ ಮನೆಯಲ್ಲಿ ಚೆನ್ನಾಗಿ ಕೆಲಸ ಮಾಡಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ಟ್ವಿಟರ್​ನಲ್ಲಿ #Araviya ಹ್ಯಾಷ್​ಟ್ಯಾಗ್​ ಕೂಡ ಟ್ರೆಂಡ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net