

ಬೆಂಗಳೂರು: ಕರೊನಾ ಲಾಕ್ಡೌನ್ನಿಂದಾಗಿ ಬಿಗ್ಬಾಸ್ 8ನೇ ಆವೃತ್ತಿಯು 75 ದಿನಗಳಿಗೆ ಮೊಟಕುಗೊಂಡಿತ್ತು. ಮತ್ತೆ ಶೋ ಮರು ಪ್ರಸಾರ ಆಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಇದರ ನಡುವೆಯೇ ಎರಡನೇ ಇನ್ನಿಂಗ್ಸ್ ಶುರುವಾಗಲಿದೆ ಎಂಬ ಮಾತು ಬಿಗ್ಬಾಸ್ ಅಭಿಮಾನಿಗಳಿಗೆ ಖುಷಿ ನೀಡಿತು. ಅದರಂತೆಯೇ ಬುಧವಾರ (ಜೂನ್ 23) ಸಂಜೆಯಿಂದಲೇ ಬಿಗ್ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗಿದ್ದು, ಸ್ಪರ್ಧಿಗಳು ಮತ್ತೊಮ್ಮೆ ಮನೆ ಸೇರಿಕೊಂಡಿದ್ದಾರೆ.
ಇದರ ನಡುವೆ ಬಿಗ್ಬಾಸ್ ಸ್ಪರ್ಧಿಗಳಲ್ಲಿ ಒಬ್ಬರಾದ ಕೆ.ಪಿ. ಅರವಿಂದ್ ಈ ಆವೃತ್ತಿಯ ವಿನ್ನರ್ ಆಗಲು ಸಾಧ್ಯವೇ ಇಲ್ಲ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.
ಯಾವುದೇ ಅಡ್ಡಿಯಿಲ್ಲದೆ ಶೋ ನಡೆದಿದ್ದರೆ ಬಹುಶಃ ಅರವಿಂದ್ಗೆ ಶೋ ಗೆಲುವ ಅವಕಾಶ ಇತ್ತು. ಆದರೆ, ಇದೀಗ ಲಾಕ್ಡೌನ್ ಬ್ರೇಕ್ನಿಂದಾಗಿ ಸ್ಪರ್ಧಿಗಳು ತಮ್ಮ ಕಾರ್ಯಗಳು ಮತ್ತು ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಲು ಸಾಕಷ್ಟು ಸಮಯವನ್ನು ಪಡೆದಿದ್ದು, ತಮ್ಮ ಆಟದ ಶೈಲಿಯನ್ನು ಬದಲಾಯಿಸುವ ಸಾಧ್ಯತೆ ಇದೆ.
ಟ್ರೋಫಿ ಗೆಲ್ಲಲು ಎಲ್ಲರಿಗೂ ಎರಡನೇ ಅವಕಾಶ ದೊರಕಿರುವುದರಿಂದ ಎಲ್ಲರ ಗೇಮ್ ಪ್ಲಾನ್ ಕೂಡ ಬದಲಾಗಿರುತ್ತದೆ. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಸ್ಪರ್ಧಿಗಳ ನಡವೆ ಒಳ್ಳೆಯ ಪೈಪೋಟಿ ಏರ್ಪಡುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅರವಿಂದ್ಗೆ ಗೆಲುವು ಸ್ವಲ್ಪ ಕಷ್ಟವಾಗಲಿದೆ.
ಈ ಹಿಂದೆ ಅರವಿಂದ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಜೋಡಿ ಬಿಗ್ ಮನೆಯಲ್ಲಿ ಕಮಾಲ್ ಮಾಡಿದ್ದು, ಎರಡನೇ ಇನ್ನಿಂಗ್ಸ್ನಲ್ಲಿ ಅರವಿಂದ್ ಯಾವ ಗೇಮ್ ಪ್ಲಾನ್ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)